ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ವಾಡಿದ್ದು ಮಹಾರಾಯ, ಗಿರಲಿಲ್ಲ. ಆಕೆಗೂ ವಯಸ್ಸಾಗಿತ್ತು, ಕಿವಿ ಮಧ್ಯವಾಗಿತ್ತು, ಮನೇ ಕೆಲಸ ಯಾವುದೂ ಇವಳ ಕೈಯಲ್ಲಿ ಸಾಗುತಿರಲಿಲ್ಲ. ಇಂಧಾ ಮುದುಕಿಯು ಈ ಎಳೆಮಗುವನ್ನು ಸಾಕಿಕೊಂಡು ಮನೇ ಕೆಲಸವನ್ನೂ ತೂಗಿಸಿಕೊಂಡು ಹೋಗುವುದು ಅಸಾ ಧ್ಯವಾಗಿತ್ತು. ಈ ಮಗುವಿಗೆ ಕೂಲಿಹಾಲನ್ನು ಕೊಡಿಸುತಾ ಇದ್ದರು. ಹಾಲು ಕೊಡುತಿದ್ದ ಮರಿಯು ಮಗುವಿಗೂ ಮನೆಯವರಿಗೂ ವಿಶೇಷವಾಗಿ ಕಿರುಕುಳ ಮಾಡುತಿದ್ದಳು. ಒಂದಾನೊಂದು ದಿವಸ ಬೆಳಗಿನಿಂದ ರಾತ್ರಿ ೧೦ ಘಂಟೀ ವರೆಗೂ ಮುರಿಯು ಬರಲಿಲ್ಲ. ಮಗುವಿನ ರೋದನ ಬಲವಾ ಯಿತು. ಯಾವ ಕೆಲಸಕ್ಕೂ ಅದು ಕೈ ಬಿಡದೇ ಹೋಯಿತು. ಅತ್ತು ಅತ್ತು ಮಗುವಿನ ಹೊಟ್ಟೆಯಲ್ಲಿ ಊದಿಹೋಯಿತು. ಯಾರು ಸುದಾರಿಸಿದರೂ ಸುಮ್ಮನಾಗದೇ ಹೋಯಿತು. ಎಲ್ಲಿ ಹುಡುಕಿದರೂ ಮರಿ ಸಿಕ್ಕಲಿಲ್ಲ. ಆಗ ಸದಾಶಿವ ದೀಕ್ಷಿತನು ತಾಯಿಯನ್ನು ಕುರಿತು-ಅನಾ, ನಗು ಹೀಗೆ ಅಳುವುದನ್ನು ನೋಡಿ ನಾನು ಸಹಿಸಲಾರೆ, ನಾನು ಎಲ್ಲಿ ಯಾದರೂ ದೇಶಾಂತರ ಹೋಗುತ್ತೇನೆ, ಮಗುವನ್ನು ಹಾಕಿ ಕೊಳ್ಳುವ ಪುಣ್ಯಾತ್ಮರಿಗೆ ಕೊಟ್ಟುಬಿಡೋಣ ಎಂದು ದುಃಖದ ನು. ವಾರ್ವತಮ್ಮನೂ ಅಳುತಾ ಇದ್ದಳು. ಆ ಸಮಯಕ್ಕೆ ರಾತ್ರಿ ೧೦ ಘಂಟೆಯಮೇಲೆ ದಾದಿಯು ಬಂದಳು. ಅವಳನ್ನು ಕಂಡು ಮುದುಕಮ್ಮನು ಮನಸ್ಸು ರೋಸಿ, ಎಲೆ ಪಾಪಿ, ನನ್ನ ಗೋಳನ್ನು ಯಾಕ ಹುರಿದುಕೊಳ್ಳುತೀಯೆ ? ಈ ಮಗುವ ನ್ನು ಕೊಂದಾದರೂಬಿಡು, ಎಂದು ಮಗುವನ್ನು ಪಾರ್ವತಮ್ಮ