ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಣೋ ಮಹಾರಾಯ, ಎತಿ ತಂದು ನಿಂತನಿಲುವಿಗೂ ಅವಳ ಕಾಲನೇಲೆ ಎತ್ತಿ ಹಾಕಿ ಬಿಟ್ಟಳು. ಮಗುವಿಗೆ ಮೂರ್ಛ ಬಂತು. ಆಗ ದಾದಿಯು ಯಾ ನ ಮಾತನ್ನೂ ಆಡದೇ ಮಗುವನ್ನು ಎತ್ತಿಕೊಂಡು ಕಿವಿಯಲ್ಲಿ ಊದಿ ಬಾಯಬಿಡಿಸಿ ಹಾಲನ್ನು ಕರೆದಳು. ಸ್ವಲ್ಪ ಹೊತ್ತಿನ ಮೇಲೆ ಜ್ಞಾನಬಂತು. ಇಂಥಾ ಹೊಡೆಬಾಳಿನಲ್ಲಿ ಒಂದು ದಿವಸ ಕಳೆಯುವುದು ಒಂದು ಯುಗವಾಗಿತ್ತು. ಹೆಂಡತಿಸಾಯುವಾಗ್ಗೆ ಸದಾಶಿವ ದೀಕ್ಷಿತನಿಗೆ ೩೦ ವರ್ಷ ವಯಸ್ಸು, ಈತನು ಕೆಂಪಗೆ ತೇಜಸ್ವಿಯಾಗಿದ್ದನು. ತಕ್ಕನು ಟ್ವಿಗೆ ಋಗೈದ ಅಧ್ಯಯನವಾಗಿತ್ತು. ಚಾತಕವನ್ನೂ ಪಂಚಾಂ ಗವನ್ನೂ ಗುಣಿಸುವಮಟ್ಟಿಗೆ ಜ್ಯೋತಿಷ ಬರುತಿತ್ತು. ಆದರೆ ಯಾರಮನೆಗೂ ಸಂಚಾಂಗಹೇಳುವುದಕ್ಕೆ ಹೋಗುತಿರಲಿಲ್ಲ. ಯಾ ನ ಕಾವ್ಯ ಪುರಾಣ ಮುಂತಾದ್ದನ್ನು ಕೊಟ್ಟರೂ ಯಾರ ಅ ಪೇಕ್ಷೆ ಇಲ್ಲದೆ ಇತರರಿಗೆ ಅರ್ಧ ಹೇಳುವವಗೆ ಸಂಸ್ಕೃ ತ ಭಾವೆಯಲ್ಲಿ ಚಾನವಿತ್ತು. ಆದರೆ ಕಟ್ಟಿವುರಾಣ ಮುಂತಾ ದ್ದಕ್ಕೆ ಹೋಗುತಿರಲಿಲ್ಲ. ಪೂರ್ವಾಪರಪ್ರಯೋಗವು ವ್ಯಾಖ್ಯಾನ ಸಹಿತವಾಗಿ ತಿಳಿದಿತ್ತು. ಆದರೆ ಸಿಕ್ಕಿ ದಕಡೆ ಆನುಶ್ರಾದ್ಧಕ್ಕೆ ಹೋಗುತಿರಲಿಲ್ಲ. ವೇದಾಂತಶಾಸ್ತ್ರದಲ್ಲಿ ಪರಿಶ್ರಮವಿತ್ತು. ಆದ ರೆ ಬರೀ ಒಣವೇದಾಂತಿಯಾಗಿ ಪುರಾಣ ವೈರಾಗ್ಯವನ್ನು ಹೇಳು ತಿರಲಿಲ್ಲ. ಈತನಿಗೆ ಲೌಕಿಕ ವರ್ತನೆಯ ತಕ್ಕಮಟ್ಟಿಗಿತ್ತು. ಆದರೆ ಜಗಳಗಂಟರಿಗೆ ಅರ್ಜಿ ಬರೆದುಕೊಟ್ಟು ವ್ಯಾಜ್ಯವನ್ನು ಹು ಹಾಕುತಿರಲಿಲ್ಲ. ಗ್ರಂಧಕಾಲಕ್ಷೇಪದಲ್ಲಿ ಯಾವಾಗಲೂ ಆಸ ಕೈಯುಳ್ಳ ಸದಾಶಿವದೀಕ್ಷಿತನಿಗೆ ರಾಜಯೋಗದಲ್ಲಿ ಪರಿಶ್ರಮ ೧