ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೨ ೨೩೨ ಮಾಡಿದ್ದುಣ್ಣೆ ಮಹಾರಾಯ, ಈ ಮನುಷ್ಯನನ್ನು ಪಶುಪತಿ ಸಾಂಬಶಾಸ್ತ್ರಿಯ ಸದಾ ಶಿವ ದೀಕ್ಷಿತನೂ ಹೋಗಿ ಆತನ ಮನೆಯಲ್ಲಿ ಕಂಡರು. ಜನ ವಿಶೇಷವಾಗಿ ಇಲ್ಲದ ಸಮಯವನ್ನು ನೋಡಿ, ಸೀತಮ್ಮನ ಸ್ಥಿ ತಿ ಕುರಿತು ವಿಸ್ತಾರವಾಗಿ ಹೇಳಿದರು. ಏನೋ ಕೆಲವು ಗಣಿ ತವನ್ನು ಹಾಕಿ ನೋಡಿ ಮಂತ್ರ, ಶಾಸ್ತ್ರದ ಪುಸ್ತಕಗಳನ್ನು ಶೋಧಿಸಿದ ತರುವಾಯ ಶೇಷಯ್ಯನು- ಈ ದಿವಸ ಶುಕ್ರ ವಾರ, ನನಗೆ ವ್ಯವಧಾನ ಕಡಮೆ ಮತ್ತು ಯಾವ ಸಂಗತಿ ಯನ್ನೂ ಖಂಡಿತವಾಗಿ ಮಾತನಾಡತಕ್ಕದೂ ಅಲ್ಲ. ನಾಳೆ ಶನಿವಾರ ಯಾವ ಮಾತೂ ಬೇಡ, ನಾಡಿದ್ದು ಆದಿತ್ಯವಾರ ಬೆಳಗ್ಗೆ ಬಂದರೆ ಹೇಳುತ್ತೇನೆ ಎಂದನು. ಅದೇಪ್ರಕಾರ ಆದಿ ತ್ಯವಾರ ಹೋಗಿ ಕಾಣಲಾಗಿ ಶೇಷಯ್ಯನು ನನ್ನ ಲೆಕ್ಕಾ ಚಾರದಲ್ಲಿ ಹೊರಟದ್ದನ್ನು ನಾನು ಹೇಳುತ್ತೇನೆ, ನಿನ್ನು ಅನುಭವವನ್ನು ನೀವು ನೋಡಿಕೊಳ್ಳಿ, ನಿಮ್ಮ ಸ್ವಸ್ಥಳಕ್ಕೆ ಕೇವಲ ಸಮಾನವಾಗಿ ಒಬ್ಬ ಶೂದ್ರ ಇದಾನೆ, ಅವನು ದುಷ್ಯ, ಸೈಣ್ಯನಾಗಿ ಮಾಡಿದ ಪ್ರಯತ್ನ ನಾಗದೇ ಹೋ ದರಿಂದ ಒಂದು ದೇವತೆಯನ್ನು ಆವಾಹನೆಮಾಡಿ ಶೂನ್ಯ ಮಾಡಿ, ರೋಗಿಯು ಯಾವಾಗಲೂ ತುಳಿಯತಕ್ಕೆ ಒಂದು ಸ್ಥಳದಲ್ಲಿ ಒಂದು ಬೊಂಬೆಯನ್ನು ಹೂಳಿದಾನೆ. ಇವನಿಗೆ ಒಬ್ಬ ಬ್ರಾಹ್ಮಣನ ಸಹಾಯವಿದೆ. ಈ ಬ್ರಾಹ್ಮಣನು ಮೊದ ಲಿನಿಂದಲೂ ನಿನಗೆ ಮಿತ್ರನಾಗಿಯೇ ಇದ್ದು ಶತ್ರುವಾಗಿದಾನೆ. ಇದು ಚೆನ್ನಾಗಿ ನೋಡಿದರೆ ಗುಣವಾದೀತೆ ಆಗಲಾರದೆ ಎಂದು ಜೀವಚಿಂತೆ ನಿಮಗೆ ಹುಟ್ಟಿದೆ. ನನ್ನ ಜನ್ಮ ದಲ್ಲಿ