ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩ ಮಾಡಿದ್ದುಣೋ ಮಹಾರಾಯ, ಇಂಥಾ ಸಂದರ್ಭ ನನಗೆ ದೊರೆತಿರಲಿಲ್ಲ. ಗ್ರಂಥದಲ್ಲಿ ಯೇನೋ ವಿಷಯ ಹೇಳಿದಾನೆ. ವಾಣಭಯ ಚೆನ್ನಾಗಿ ತೋರುತ್ತೆ, ಇದು' ಹಿಂತಿರುಗುವುದು ಕಷ್ಟ; ಇನ್ನೊಂದು ಪ್ರಕ್ರಿಯೆ ರೀತ್ಯಾ ನೋಡಿದರೆ ಕೊನೆಗೆ ವಾಣಭೀತಿ ಇಲ್ಲ ವೆಂತಲೂ ತೋರುತ್ತೆ. ಹೇಗೆ ಹೇಳುವುದಕ್ಕೂ ನನಗೆ ಬು ದಿ ಓಡುವುದಿಲ್ಲ. ಹಗಲುವೇಷದ ಕೃಷ್ಣಯ್ಯ ಇಲ್ಲಿಗೆ ಬರು ತಾನೆ. ಆತನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಇಬ್ಬರೂ ಸೇರಿ ಯೋಚಿಸಿ ಆ ಮಹಾತಾಯಿಯಮೇಲೆ ಭಾರ ಹಾಕಿ ನಿಷ್ಕರ್ಷೆ ಮಾಡೋಣ. ಈ ವಿಜಾತೀಯವಾದ ಸ್ಥಿತಿಯನ್ನು ವಿಚಾರಮಾಡಿ ಒಂದು ಸಿದ್ಧಾಂತ ಮಾಡುವುದರಲ್ಲಿ ನನಗೆ ಕು ತೂಹಲ ನಿನಗಿಂತಲೂ ಹೆಚ್ಚಾಗಿದೆ. ನಾಳೆ ಸೋಮವಾರ ಮಧ್ಯಾಹ್ನ ಬನ್ನಿ ಎಂದು ಹೇಳಿದನು. ಹಗಲುವೇಷದ ಕೈಯ್ಯನು ಇಂಧಾ ವಿಷಯಗಳ ನ್ನು ಬಹಳವಾಗಿ ತಿಳಿದವನು. ಇವನು ಹುಟ್ಟುತಾ ತೆನಗು ರಾಜ್ಯದವನಂತೆ, ಬಾಲ್ಯದಿಂದಲೂ ಮಲೆಯಳದಲ್ಲಿದ್ದನು. ಅ ಲ್ಲಿ ಅನೇಕ ಸಂಗತಿಗಳನ್ನು ವ್ಯಾಸಂಗಮಾಡಿ ತಿಳಿದುಕೊಂಡಿ ದ್ದನು. ಈತನಿಗೆ, ಯಂತ್ರ, ಮಂತ್ರ, ಶುಕ್ರನಾಡಿ ಪ್ರಕಾರ ಜ್ಯೋ ತಿಷ, ಚರಕ ಪ್ರಯೋಗದ ವೈದ್ಯ, ಗಣೇಶಪ್ರಶ್ನೆ, ಶೂನ್ಯ ಮಾಡು ವುದು, ಮಾಡಿದ್ದನ್ನು ತಿರುಗಿಸುವುದು, ಅಗ್ನಿ ಸ್ತಂಭ ಜಲಸ್ತಂ ಭಾದಿ ಕಂಣುಕಟ್ಟು ಮಾಯದವಿದ್ಯೆಗಳು ಚೆನ್ನಾಗಿ ತಿಳಿದಿದ್ದದ ಲ್ಲದೆ ಹಗಲಿವೇಷವನ್ನು ಹಾಕುವುದರಲ್ಲಿ ಇವ ನಿಪುಣನಾಗಿದ್ದನು. ಈತನು ಮೈಸೂರು ಸಂಸ್ಥಾನಕ್ಕೆ ಬಂದು ಪ್ರಭುಗಳ ಭೇ 30