ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೬ ಮಾಡಿದ್ದು ಣೋ ಮಹಾರಾಯ, ಆ ಕಾಲದಲ್ಲಿ ಮೈಸೂರಿಗೆ ಒಬ್ಬ ಬೈರಾಗಿ ಬಂದಿದ್ದು, ಕುಪ್ಪಣ್ಣನ ತೋಟಕ್ಕೆ ಪಶ್ಚಿಮದಲ್ಲಿದ್ದ ಪೂರ್ಣಯ್ಯನ ಕಂದ ಕದಲ್ಲಿ ಅವಧೂತ ಸೂರನಾರಾಯಣನ ಮಂಟಪವೆಂದಿತ್ತು. ಅದರಲ್ಲಿ ಆ ಬೈರಾಗಿ ಬಂದು ಇಳಿದುಕೊಂಡನು. ಇವನು ಪ್ರತಿನಿತ್ಯವೂ ಒಂದುಸೇರು ಹಸೀ ಜಾವಾಳದ ಬೀಜವನ್ನು ತಿ ನ್ನು ತಾ ಇದ್ದನು. ಅರಮನೇ ಇಲಾಖೆಯ ಜಿನಸಿ ಕಚೇರಿ ಯಿಂದ ಚಾವಾಳವನ್ನು ಕೊಡಿಸಬೇಕೆಂದು ದೊರೆಗಳ ಅಪ್ಪಣೆ ಯಾಗಿತ್ತು. ಅದನ್ನು ಕೊಡಿಸತಕ್ಕ ಕೆಲಸವು ಚಿತ್ರಗಾರ ತಿ ಹೃಣ್ಯನಿಗೆ ನೇಮಕವಾಗಿತ್ತು. ಈ ಚಿತ್ರಗಾರ ತಿಪ್ಪಣ್ಣನಲ್ಲಿ ದೊರೆಗೆ ವಿಶೇಷವಾದ ಅಭಿಮಾನವಿತ್ತು. ರಾತ್ರೆ ಸ್ವಲ್ಪ ಹೊ ತ್ತು ಹೊರತು ಉಳಿದ ಎಲ್ಲಾ ಕಾಲದಲ್ಲಿಯೂ ತಿಪ್ಪಣ್ಣನು ದೊರೆಯ ಸಮೀಪದಲ್ಲಿಯೇ ಇರುತಾ ಚೆದುರಂಗ ಗಂಜೀಪು ಮೊದಲಾದ ಆಟಗಳನ್ನು ಅವರ ಸಂಗಡ ಆಡುತಾ ಏನೋ ದವಾಗಿ ಕಾಲವನ್ನು ಕಳೆಯುತ್ತಿದ್ದನು. ಪ್ರಭುಸನ್ನಿಧಿಯಲ್ಲಿ ಈ ತಿಪ್ಪಣ್ಣನಿಗೆ ವಿಶೇಷವಾದ ಗೌರವವಿದ್ದರೂ, ಈತನು ಯಾರಿಗೂ ಕೇಡನ್ನು ಮಾಡುತಿರಲಿಲ್ಲ. ಸಾಧ್ಯವಾದಮಟ್ಟಿಗೆ ಅನೇಕರಿಗೆ ಉಪಕಾರವನ್ನು ಮಾಡಿದನು. ಇತರರಿಂದ ಆಗದ ಕೆಲಸ ಈತನಿಂದ ಆಗುತಿತ್ತು. ಜೀವನ್ನು ಪಠದ ಆಟ ಮೊದಲಾದ ಆಟಗಳನ್ನು ಹೊಸದಾಗಿ ಏರ್ಪಡಿಸಿದವನು ಈತನೇ, ಅನೇಕರು ಈತನನ್ನು ಮನೆಯಲ್ಲಿ ಅನುಸರಿಸುತಿದ್ದರು. ಒಂ ದುದಿವಸ ಬೆಳಗ್ಗೆ ೮ ಗಂಟೆ ಸಮಯದಲ್ಲಿ ತಿಪ್ಪಣ್ಣನ ಮ ನೆಯ ಮಹಡೀಮೇಲೆ ಅನೇಕರು ಸೇರಿದರು. ಹಗಲಿವೇಷ