ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭ ಮಾಡಿದ್ದುಣ್ಣೆ ಮಹಾರಾಯ, ದ ಕೃಷ್ಣಯ್ಯನೂ ಅಲ್ಲಿಗೆ ಬಂದು ಕೂತಿದ್ದನು. ಬೈರಾಗಿ ಗೆ ಜಾವಾಳದ ಬೀಜವನ್ನು ತೆಗೆದುಕೊಂಡು ಹೋಗಲು ಅ ವನಕಡೆಯವರು ಬಂದು ತಗಾದೆ ಮಾಡಿದರು. ಕೃಷ್ಣಯ್ಯ ನು ಈ ಸಂಗತಿಯನ್ನು ವಿಚಾರಿಸಿ ತಿಳಿದುಕೊಂಡು-ತಿಪ್ಪಣ್ಣ ನವರೆ, ಸಮೀರ, ವತ್ಸನಾಭಿ, ಇಲೀ ವಾಷಾಣ ಮೊದಲಾಗಿ ನವವಾಷಾಣಗಳನ್ನು ತರಿಸಿ ಒರಳಲ್ಲಿ ಹಾಕಿಸಿ ಕುಟ್ಟಿ ಪುಡಿ ಮಾಡಿಸಿ ತರಿಸಿ ; ಅದರಲ್ಲಿ ಒಂದು ಚಮತ್ಕಾರವಾದ ಸಂಗತಿ ಯನ್ನು ತೋರಿಸುತ್ತೇನೆ ಎಂದನು. ಹಗಲುವೇಷದವನಾದಕಾ ರಣ ಯಾವ ತಂತ್ರವನ್ನು ಮಾಡುತಾನೋ ನೋಡಬೇಕೆಂದು ತಿಪ್ಪಂಣನು ಜಿನಸೀಕಚೇರಿಯಿಂದ ನವವಾಷಾಣಗಳನ್ನು ತರಿಸಿ ಹುಡಿಮಾಡಿಸಿದನು. ಆ ಹುಡಿಯನ್ನು ಬೆಳ್ಳಿತಟ್ಟೆಯಲ್ಲಿ ಹಾ ಕಿತಂದು ಕೃಷ್ಣಯ್ಯನ ಮುಂದೆ ಇರಿಸಿದರು. ಕೃಷ್ಣಯ್ಯ ನು ಆ ಪುಡಿಯನ್ನೆಲ್ಯಾ ಹುರಿಟ್ಟು ಮುಕ್ಕಿದಂತೆ ಮುಕ್ಕಿ ಪೂ ರೈಸಿದನು. ಅಷ್ಟರಲ್ಲಿಯೇ ಅರಮನೆಯಿಂದ ಕರೆಯುವುದಕ್ಕೆ ಬಂದರು. ತಿಪ್ಪಂಣ ಹೊರಟುಹೋದನು. ಅಲ್ಲಿದ್ದವರೆಲ್ಲರಿ ಗೂ ಈ ಕೃಷ್ಣಯ್ಯನ ಕೃತ್ಯವನ್ನು ಕಂಡು ವಿಶೇಷವಾಗಿ ಭ ಯವಾಯಿತು. ಒಬ್ಬೊಬ್ಬರಾಗಿ ಎದ್ದು ತಮ್ಮ ಮನೆಗಳಿಗೆ ಹೊರಟುಹೋದರು. ಕೃಷ್ಣಯ್ಯ ಒಬ್ಬನೇ ನಿಂತನು. ಎ ಷ್ಟು ಹೊತ್ತು ನೋಡಿದರೂ ಯಾರೂ ಬರಲಿಲ್ಲ. ಕೃಷ್ಣಯ್ಯ ನು ತಾನೂ ಎದ್ದು ಮನೆಗೆ ಹೊರಟುಹೋಗಿ ಆ ಕವನ್ನು ತೀರಿಸಿಕೊಂಡು ಊಟಾ ಮಾಡಿ ಸುಖವಾಗಿ ಮಲಗಿಕೊಂಡು ನಾ ಲ್ಕು ಗಂಟೆಗೆ ಎದ್ದು ಎಲೆ ಅಡಕೆಯನ್ನು ಹಾಕಿಕೊಳ್ಳುತಾ