ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೦ ೨೪೦ ಮಾಡಿದ್ದು ಸ್ಫೋ ಮಹಾರಾಯ. ಡುತಿದ್ದಳೆಂದು ಎಲ್ಲಿಯೋ ಗಾಳೀ ಸಮಾಚಾರ ಕೇಳಿದ್ದೆ, ಈ ಗಲ ಹಾಗೆಯೇ ಇದೆಯೆ ? ಎಂದು ಅಪ್ಪಣೆಯಾಯಿತು. ಈ ಮಾತಿಗೆ ಪಶುಪತಿ ಸಾಂಬಶಾಸ್ತ್ರಿಯು ಯಾವ ಮಾತನ್ನೂ ಆಡದೆ ಸುಮ್ಮನೇ ನಿಂತುಕೊಂಡನು. ಸದಾಶಿವ ದೀಕ್ಷಿತನುರಾಜಸಭೆಯಲ್ಲಿಯೂ ಸಹಿತ ಹೆಂಡತಿಯ ಅವಿವೇಕವು ಬಂಣಾ ಬರೆದು ಹೋದಮೇಲೆ, ಇನ್ನು ತಾನು ಬದುಕಿ ಫಲವೇನೆಂ ದು ಮುಖವನ್ನು ಚಿಕ್ಕದು ಮಾಡಿಕೊಂಡು ತಲೆಬಾಗಿ ನಾ ನವಾಗಿ ನಿಂತುಕೊಂಡನು. ಅದಕ್ಕೆ ಕೃಷ್ಣರಾಜಪ್ರಭುವುಸಿಡಿಲಮರಿ, ನೀನು ಯಾಕೆ ಅಷ್ಟರಲ್ಲಿಯೇ ಖಿನ್ನನಾಗುತೀಯೆ? ಈ ಗ್ರಹದ್ರ ಎಲ್ಲಿಯೂ ಇದೆ. ದೇವತೆಗಳಿಗೆ ತಪ್ಪಲಿಲ್ಲ. ವಾಂಡವಾದಿಗಳಿಗೆ ತಪ್ಪಲಿಲ್ಲ. ಆ ವಿಷಯವಾಗಿ ಸಂಕೋಚ ಬೇಡ, ಹಗಲುವೇಷದ ಕೃಷ್ಣಯ್ಯನನ್ನು ಅಗತ್ಯವಾಗಿ ಕರೆ ದುಕೊಂಡು ಹೋಗು ಎಂದು ಇಂಗಿತಜ್ಞರಾದ ಪ್ರಭುವು ಅ ಸೃಣೆ ಕೊಡಿಸಿದರು. ಇನ್ನು ೫-೬ ದಿವಸಕ್ಕೆ ತನ್ನ ತಂ ದೆಯ ವೈದೀಕ ಬರುವುದು, ಅದನ್ನು ಮಾಡಿಕೊಂಡು ಹೊರ ಡುತೇನೆಂದು ಕೃಷ್ಣಯ್ಯನು ಹೇಳಿದನು. ಅಲ್ಲಿಂದ ಪಶುಪತಿ ಸಾಂಬಶಾಸ್ತ್ರಿಯ ಸದಾಶಿವದೀಕ್ಷಿತ ನೂ ಮನೆಗೆ ಬಂದು ಭೋಜನ ಮಾಡಿ ಕೂತುಕೊಂಡರು. ಅಷ್ಟರೊಳಗಾಗಿ ಮಹಾದೇವನು ತಂದೆಗೆ ಒಂದು ಕಾಗದವ ನ್ನು ಬರೆದು ಒಬ್ಬ ಆಳಿನಕೈಯಲ್ಲಿ ಕಳುಹಿಸಿದ್ದು ಬಂದು ತಲಪಿತು. ಅದರಲ್ಲಿ ಬರೆದಿದ್ದ ಒಕ್ಕಣೆ ಎನೆಂದರೆ :-