ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಣೋ ಮಹಾರಾಯ, $೪* ಯಾಕ ಹಿಟ್ಟಿ ತಿನ್ನಲಿಲ್ಲ ಎಂದು ಕೇಳಿದ. ನಾನು ಗಡಗ ಡನೆ ನಡುಗುತಾ ಕೆಳಕ್ಕೆ ಬಿದ್ದೆ. ಆಗ ಅವನು ಒಣಕಲ ರೊಟ್ಟಿಯನ್ನು ತಂದು ನಮ್ಮಿಬ್ಬರಿಗೂ ಕೊಟ್ಟನು. ಅದನ್ನು ತಿಂದು ನೀರ ಕುಡಿದಮೇಲೆ ಸ್ವಲ್ಪ ಉಸಿರು ಬಂತು. ಹೀ ಗೆಯೇ ಕಷ್ಟಪಟ್ಟು ಕಾಲ ಕಳೆಯುತ್ತಾ ಬಂದೆವು. ನಮ್ಮ ಕೈ ಅಡಿಗೆ ಮಾಡುವ ಹಾಗಾದಳು. ನನ್ನ ಚಿಕ್ಕಪ್ಪ ಅ ಡಿಗೆಯನ್ನು ಅವಳ ಕೈಲಿ ಮಾಡಿಸುತ್ತಾ ಬಂದಳು. ಆಗಿನಿಂದ ನಮ್ಮಿಬ್ಬರಿಗೂ ಹೊಟ್ಟಿತುಂಬ ಹಿಟ್ಟು ಸಿಕ್ಕುವಹಾಗಾಯಿತು. ನಾವು ಜಾತಿಯಲ್ಲಿ ಪುರಾವೆಯವರಂತೆ, ನಮ್ಮಲ್ಲಿ ನೆರೆ ಯುವುದಕ್ಕೆ ಮುಂಚೆಯೇ ಮದುವೆಯಾಗಬೇಕಂತೆ, ನಮ್ಮನ್ನು ಕ್ಯ ನೋಡುವುದಕ್ಕೆ ಬಹಳ ಲಕ್ಷಣವಾಗಿದ್ದಳು. ಅವಳಿಗೆ ೧೨-೧೩ ವರುಷವಾಗುತಾ ಬಂತು. ಅವಳನ್ನು ಮದುವೇ ಮಾಡಿಕೊಡಿ ಎಂದು ಅನೇಕರು ಕೇಳುವುದಕ್ಕೆ ಬಂದರು. ಆ ಹೆಣ್ಣಿಗೆ ೫೦ ವರಹ ಕೊಟ್ಟವರಿಗೆ ಮದುವೆ ಮಾಡಿಕೊ ಡುವುದಾಗಿ ನಮ್ಮ ಚಿಕ್ಕಪ್ಪ ಹಠಮಾಡಿಕೊಂಡಿದ್ದನು. ಮ ದುವೆಗೆ ಮುಂಚೆ ತಾನು ದೊಡ್ಡವಳಾದರೆ ಜಾತಿಯಿಂದ ಹೊ ರಗೆ ಹಾಕುತಾರೆ, ಹೇಗಾದರೂ ಆಗಲಿ ಯಾರಾದರೂ ಮುದು ನೇಮಾಡಿಕೊಂಡರೆ ಸಾಕು ಎಂದು ನನ್ನ ಅಕ್ಕ ದೇವರಿಗೆ ಹರಕೆ ಹೊರುತಿದ್ದಳು. ಕಣವೇಕೆಳಗಿನಿಂದ ಹೆಂಣ ಹುಡುಕಿ ಕೊಂಡು ಒಬ್ಬ ಮನುಷ್ಯ ಬಂದನು. ಯಥಾ ಪ್ರಕಾರವಾಗಿ ೫೦ ವರಹಕ್ಕೆ ಒಂದು ಕಾಸು ಕಡಮೆಯಾದರೂ ಹೆಂಣ ಕೊ ಕೊಡುವುದಿಲ್ಲವೆಂದು ನನ್ನ ಚಿಕ್ಕಪ್ಪ ಹೇಳಿದನು. ಕೊನೆಗೆ 32