ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೫ ಮಾಡಿದ್ದುಣ್ಣೂ ಮಹಾರಾಯ, ದುಹೋದೆ. ಆಗ ನನ್ನ ಮನಸ್ಸಿಗೆ ಬಹಳ ಕಳವಳವಾಯಿ) ತು, ರಾತ್ರಿ ನಾನು ಏನು ಮಾಡಬೇಕು ? ಕನ ಹಾಕಿ ಒಳ ಗೆ ನುಗ್ಗಿ ಊಟೀವಾ ಡಲೆ, ಸಾಕ್ಷಾತ್ ಅಕ್ಕನಿಗೆ ದೆಹಿ ಯಾಗುತ್ತೇನೆ. ಒಲ್ಲೆ ನೆಂದೇನೇ ನನ್ನ ಜೊತೆಗಾರರು ನನ, ಸುಮ್ಮನೇ ಬಿಡುವುದಿಲ್ಲ. ಈ ಕಳವಳ ನನಗೆ ಹೆಚ್ಚಾಯಿತು. ಕೊನೆಗೆ ಏನೋ ಸಿದ್ದಾಂತಮಾಡಿಕೊಂಡೆ. ಆ ದಿವಸ ಕರೀ ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಂಡು ಹೋದೆ. ಕತ್ತಲೆ ಯಾದ್ದರಿಂದ ಅದುಯಾರಿಗೂ ಕಾಣಲಿಲ್ಲ ಕನ್ನದ ಒಳಕ್ಕೆ ನುಗ್ಗಿದೆ. ಸ್ವಲ್ಪ ಹೊತ್ತು, ಒಳಗೆ ಇದ್ದೆ. ಬಂಗಾರದ ಬಂದಿ ಯನ್ನು ಚೂರುಚೂರಾಗಿ ಕತ್ತರಿಸಿದ ಚಿನ್ನದ ಮುರುಕುಗ ಳು ಸುಮಾರು ತೂಕದಲ್ಲಿ ಮರುಸೇರಿನಷ್ಟು ನನ್ನ ಕರಿ ಬಟ್ಟೆಯಿಂದ ತೆಗೆದು ನನ್ನ ಕೈನ ತಲೆದಸಿಯಲ್ಲಿರಿಸಿ ಅವಳ ಕಾಲಿಗೆ ನಮಸ್ಕಾರಮಾಡಿ ಈಚೆಗೆ ಬಂದೆ. ನನ್ನ ವರು ಏನು ಎಂದು ಕೇಳಿದರು. ಸಾಮಾನೆಲ್ಲವನ್ನೂ ನೆಲಮಾಳಿಗೆಯಲ್ಲಿ ಹಾಕಿದಾರೆಂದು ತೋರುತ್ತೆ. ಮೇಲೆ ಏನೂ ಸಿಕ್ಕಲಿಲ್ಲ ಎಂದು ಸುಳ್ಳ ಹೇಳಿದೆ. - ಒಂದುಸಾರಿ ಇನ್ನೊಂದು ಹೆಚ್ಚು ಸಂಗತಿ ನಡೆಯಿತು. ಒಂದು ಊರಿಗೆ ಹೋದರೆ ನನ್ನ ಜೊತೆಗಾರರೆಲ್ಲರೂ ಒಂದೇ ಕಡೆಯಲ್ಲಿಳಿಯುತಿರಲಿಲ್ಲ. ಒಬ್ಬೊಬ್ಬರು ಒಂದೊಂದು ಕಡೆ ಇಳಿಯುತಿದ್ದೆವು. ಆ ಊರಹೊರಗೆ ಒಂದು ಕೊಂಬಿನಕೂಗಿ ನದೂರದಲ್ಲಿ ಒಂದು ಗುಡಿಸಿತ್ತು. ಅದು ದೊಡ್ಡಗುಡಿ, ಕೈಸಾಲೆ ಮೊದಲಾದ್ದೆಲ್ಲಾ ಬಹಳ ರುವಾಗಿತ್ತು. ನಾನು 34