೨೬೬ ಮಾಡಿದ್ದು ನ್ಯೂ ಮಹಾರಾಯ ಅಲ್ಲಿ ಹೋಗಿ ಕೈಸಾಲೆಯಲ್ಲಿ ಇಳಿದುಕೊಂಡೆ. ಅಲ್ಲಿ ಸುತ್ತಲೂ ಕಾಡು ಜೀ ಎನ್ನು ತಾಇತ್ತು, ಮರಗಳೆಲ್ಲಾ ಗಗನಕ್ಕೆ ಹೋಗಿತ್ತು. ನಮ್ಮ ಮಧ್ಯಾಹ್ನದಲ್ಲಿ ಕೂಡ ಬಿಸಿಲುಬೀಳುತಿರಲಿ ಲ್ಲ. ಕತ್ತಲೆಯಾಗಿತ್ತು. ಅಲ್ಲಿ ಕಿರಬ ತೋಳ ಬಹು ಬಲಿ ವಾಗಿದ್ದವು. ಗುಡಿಗೆ ಹತ್ತಿರದಲ್ಲಿ ಒಂದು ಹಳ್ಳ ಹರಿಯುತಾ ಇತ್ತು. ಆ ಹಳ್ಳದ ತಡಿಯಲ್ಲಿ ಕಾಡತುಳಸಿ ಕಾಡಮಲ್ಲಿಗೆ ವನಸಂಪಿಗೆ ಪಗಡೆ ಮೊದಲಾದ ಹೂವುಗಳು ಬೇಕಾದಷ್ಟು ಬಿಟ್ಟಿತ್ತು. ಕುಯ್ಯುವವರೇ ಇರಲಿಲ್ಲ. ಆ ಹೂಗಳ ವಾಸನೆ ಗನುಗಮನೆ ಅಲೈಲಾ ಸುತ್ತಿಕೊಂಡಿತ್ತು. ಅದೆಲ್ಲವನ್ನೂ ನೋಡಿದರೆ ಮನೋಹರವಾಗಿತ್ತು. ನಾನು ಆ ನದಿಯಲ್ಲಿ ಸ್ನಾನಮಾಡಿ ಸಾಧ್ಯವಾದಮಟ್ಟಿಗೆ ನಮ್ಮನ್ನು ಕುಡಿದು ತಂದು ಗುಡಿಯಲ್ಲಿದ್ದ ದೇವರುಗಳ ತಲೆಯಮೇಲೆಲಾ ಒ೦ ದೊಂದು ಹಿಡಿ ಇರಿಸುತ್ತಾ ಬಂದೆ. ನಾನು ಆ ಗುಡಿಗೆ ಹೋ ದಾಗಿನಿಂದ ಯಾರೋ ಅಳುತಾ ಇದ್ದ ಹಾಗೆ ಸದ್ದು ಕೇಳುತಾ ತು, ನಾನು ಎಲ್ಲಿ ಹುಡುಕಿನೋಡಿದರೂ ಯಾರೂ ಇರ ಲಿಲ್ಲ. ಗರ್ಭಗೃಹದ ಬಳಿಗೆ ಹೋದಾಗ ಆ ಸದ್ದು ಹೆಚ್ಚಾಗಿ ಕೇಳುತಿತ್ತು. ಆಗ ಗುಡಿಯೊಳಗೆ ಯಾರಿದಾರೋ ನೋಡ ಬೇಕೆಂದು ಹೋದೆ. ಬಾಗಿಲಿಗೆ ಬೀಗಹಾಕಿತ್ತು. ಆ ಬೀಗ ವನ್ನು ಮುರಿದೆ. ಎಷ್ಟೋ ಬೀಗ ಮುರಿದವನಿಗೆ ಅದೊ೦ ದು ದೊಡ್ಡದಾಗಿರಲಿಲ್ಲ. ಬಾಗಿಲನ್ನು ತೆಗೆದು ಒಳಕ್ಕೆ ಹೋದೆ. ಒಳಗೆ ಕತ್ತಲೆಯಾಗಿತ್ತು. ಒಂದು ದೀಪ ನೊಣನೊಣನೆ ಉರಿಯುತಿತ್ತು. ಅದನ್ನು ಮಾಡಿ ನೋಡಿದೆ. ಅಲ್ಲಿ ಒಂದು
ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೮೧
ಗೋಚರ