ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆ೬೬ ಮಾಡಿದ ಮಹಾರಾಯ, ಅಂಕಣ ದಲ್ಲಿ ಹಸೆಮಣೆ ಹಾಕಿ ಮೇಲುಹಾಸುಗೆಯನ್ನು ಹಾಸಿ ತು, ತೆಂಗಿನಕಾಯಿ ಬಾಳೆಹಂಣು ಅರಿಶಿನ ಕುಂಕುನು ಮಂತ್ರಾಕ್ಷತೆ ಹುವು ಎಳಯದೆಲೆ ಅಡಕೆ ಒಂದು ಸೇರು ಅಕ್ಕಿ ನಾಲ್ಕು ಬಾಳೆಲೆ, ಇವೇ ಮೊದಲಾಗಿ ಮಂಗಳದ್ರವ್ಯಗಳನ್ನಿ ರಿಸಿತ್ತು. ಯಾವುದೋ ಪ್ರಸ್ತಕ್ಕೆ ಸಿದ್ಧಮಾಡಿರುವಂತೆ ಕಂಡಿ ತು. ನಾನು ಒಳಕ್ಕೆ ಹೋದಕೂಡಲೆ ಸದ್ದಾಗುತಾ ಇದ್ದುದು ನಿಂತುಹೋಯಿತು. ನಾನು ಅಲ್ಲೆಲ್ಲಾ ಹುಡುಕಿದೆ. ಒಂದು ಮಲೆಯಲ್ಲಿ ..ಬ ಅಕ್ಷಣವಾದ ಹೆಂಗಸು ಕೂತಿದ್ದಳು, ನೀನು ಯಾರನ್ನ ಎಂದೆ. ಆಕೆ ಮಾತನಾಡಲಿಲ್ಲ ; ಆಕೆಗೆ ಕೈಕಾಲು ನಡುಗುವುದಕ್ಕೆ ಮೊದಲಾಯಿತು. ಭೀತಿಯಿಂದ ಹೀಗಾಗುತಾ ಇದೆ ಎಂದು ತಿಳಿದು-ನೀನು ಯಾರನ್ನು ಮಾತ ನಾಡು, ನಿನಗೆ ಯಾವಕಷ್ಟ ಪ್ರಾಪ್ತವಾಗಿದ್ದರೂ ನಾನು ನಿವಾ ರಣೆ ಮಾಡುತ್ತೇನೆ, ಹೆದರಬೇಡ, ಎಂದೆ. ಇನ್ನೂ ಗಟ್ಟಿ ಯಾಗಿ ಅಳುತ ಅಳುತಲೇ-ನೀನು ಯಾರಪ್ಪ ಎಂದಳು. ನಾನು ಯಾರೋ ನಗರೇಶಿ, ಯಾರಾದರೇನು ಎಂದೆ. ನನ್ನ ಕಷ್ಟವನ್ನು ನಿವಾರಣೆಮಾಡುತ್ತೇನೆಂದು ಕೈಮುಟ್ಟ ಪ್ರಮಾಣ ಮಾಡು ಎಂದಳು. ನಾನು ಪ್ರಮಾಣಮಾಡಿಕೊಳ್ಳಿ. ಆಗ ಆ ಹೆಂಗಸು-ನನ್ನನ್ನು ಈ ಸ್ಥಳಬಿಟ್ಟು, ಯಾರೂ ಇಲ್ಲದಕ ಡೆಗೆ ಕರೆದುಕೊಂಡು ನಡೆ ಎಂದಳು. ಮಗ್ಗ ಅಲ್ಲಿದ್ದ ಕಾಡಿ ನೊಳಕ್ಕೆ ಕರೆದುಕೊಂಡು ಹೋದೆ. ಅಲ್ಲಿ ಒಂದು ಬಂಡೆ ಇತ್ತು. ಅದರ ಕೆಳಗೆ ಒಂದು ಮೊಟ್ಟರೆ ಇತ್ತು. ಅದರ ಕೆಳ ಗೆ ನುಸಿದು ಹೋದೆವು. ಅಲ್ಲಿ ಎತ್ತರವಾಗಿ ಹಜಾರದಹಾಗೆ