ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬v ಮಾಡಿದ್ದು ಮಹಾರಾಯ, ಸ್ಥಳವಿತ್ತು, ಮಗ್ಗ ಅಲ್ಲಿಯೇ ನೀರಿನ ಚಿಲುಮೆ ಇತ್ತು. ಆ ಬಿಲ್ಲದ ದ್ವಾರದಲ್ಲಿ ಮಧ್ಯೆ ವೊರೆಯಾಗಿತ್ತು. ಅದರಿಂ ದ ಬೇಕಾದಷ್ಟು ಗಾಳಿ ಬೆಳಕು ಒಳಕ್ಕೆ ಬರುತಿತ್ತು. ಆ ಸ್ಥಳ ದಲ್ಲಿ ನಾವಿದ್ದೇವೆ ಎಂದು ಯಾರು ಎಷ್ಟು ಹುಡುಕಿದರೂ ಗೊತ್ತಾಗುವಹಾಗಿರಲಿಲ್ಲ. ಅಲ್ಲಿ ಆಕೆ ನಾನು ಕೂತುಕೊಂಡೆ ವು. ಆಗ ಆ ಹೆಂಗಸು ಹೇಳಿದ್ದೇನೆಂದರೆ:- ಇಲ್ಲಿಗೆ ಮರುಗಾವುದ ದೂರದಲ್ಲಿ ನನ್ನ ಗಂಡನ ಮನೆ ಇದೆ. ನಾವು ಜಾತಿಯಲ್ಲಿ ಉಪ್ಪಲಿಗರು. ನನಗೆ ಗಂಡಇದಾ ನೆ. ಎರಡು ಮಕ್ಕಳಿವೆ. ನನ್ನ ಗಂಡ ಒಳ್ಳೇ ವ್ಯಾಯದ ನು. ತಕ್ಕಮಟ್ಟಿಗೆ ನೆಮ್ಮದಿಯಾಗಿದಾನೆ, ಈ ವೂರಲ್ಲಿ ಹೆಚ್ಚಾಗಿ ಹಣಗಾರನಾದ ಒಬ್ಬ ಉಪ್ಪಲಿಗ ಇದಾನೆ. ಅವನಿ ಗೆ ೬೦ ವರುಷವಾಗಿದೆ. ಅವನಿಗೆ ಮರುಜನ ಹೆಂಡಿರಿದಾ ರೆ, ಮಕ್ಕಳಿಲ್ಲ. ನನ್ನನ್ನು ಮದುವೆಯಾದರೆ ಮಕ್ಕಳಾಗು ವುದೆಂದು ಯೋಚಿಸಿ, ನನ್ನ ಮಕ್ಕಳನ್ನು ನನ್ನ ಗಂಡನಿಗೆ ಬಿಟ್ಟು, ಅವನಿಗೆ ನನ್ನ ಮದುವೆತೆರವನ್ನೂ ಮೇಲೆ ೧೦೦ ವರಹವನ್ನೂ ಕೊಟ್ಟು ನನ್ನ ತಾಳಿಯನ್ನು ಅವನಿಗೆ ಕೊಡಿ ಸಿ ತರುವಾಯ ಈ ಮುದುಕನಿಗೆ ನನ್ನನ್ನು ಪುನಃ ಮದು ವೇಮಾಡಬೇಕೆಂದು ಕೆಲವರು ಗೊತ್ತು ಮಾಡಿಕೊಂಡರು. ಈ ಮುದುಕ ಜಾತಿಯ ಯಜಮಾನನಂತೆ. ಅವನ ಮಾತನ್ನು ತೆಗೆಯುವುದಕ್ಕೆ ಯಾರಿಂದಲೂ ಆಗುವುದಿಲ್ಲ. ನನ್ನ ಗಂಡನು ಅಳುತಾ ಬಂದು ನಿಂತುಕೊಂಡು ಈ ಮಾತನ್ನು ನನಗೆ ತಿಳಿ ಸಿದನು. ಆಗ ನಾನು~, ಎಂಥಾವಾತು ? ಇದ್ದರೆ ಒಬ್ಬ