ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದು ಮಹಾರಾಯ, ೨೬೯ ಗಂಡ ಇರಬೇಕು, ಇಲ್ಲದಿದ್ದರೆ ಈ ಪ್ರಾಣ ಹೋಗಬೇಕು, ಈ ಹಾಳ ಉಬ್ಬಲಿಗರ ಜಾತಿಪದ್ಧತಿಯನ್ನು ಸುಡಬೇಕು ; ಒಬ್ಬ ರಹೆಂಡತಿಯನ್ನು ಇನ್ನೊಬ್ಬನಿಗೆ ಕೊಡುವುದು ಜಾತಿಪದ್ಧ ತಿಯ ? ಒಂದು ಕಾಲಕ್ಕೂ ನಡೆಯತಕ್ಕದ್ದಲ್ಲ. ಅವರ ಒಡವೆ ಯ ಬೇಡ ಹಣವೂ ಬೇಡ, ನೀನೇ ನನಗೆ ಒಡವೆ, ನಿನ್ನ ನ್ಯೂ ಮಕ್ಕಳನ್ನೂ ಬಿಟ್ಟು ನಾನು ಎಂದಿಗೂ ಹೋಗತಕ್ಕೆ ವಳಲ್ಲ ಎಂದೆ. ಈ ಮಾತನ್ನು ಹೊರಗಿದ್ದವರು ಕೇಳಿದರು. ನನಗೆ ಇಲ್ಲದಸಮಾಧಾನವನ್ನೆಲ್ಲಾ ಹೇಳಿದರು. ಹರಗೀಸ ನಾನು ಒಪ್ಪಲಿಲ್ಲ. ಅವರೆಲ್ಲರೂ ಎದ್ದು ಹೊರಟು ಹೋದರು. ತರುವಾಯ ೮-೧೦ ದಿವಸವಾಯಿತು. ಹಗಲು ಊಟದ ಹೊ ತಿನಲ್ಲಿ ಹೊಲದಲ್ಲಿದ್ದ ನನ್ನ ಗಂಡಸಿಗೆ ಹಿಟ್ಟನ್ನು ತೆಗೆದು ಕೊಂಡು ಹೋಗುತಿದ್ದೆ. ಜನರು ಯಾರೂ ಅಲ್ಲಿರಲಿಲ್ಲ. ಹಿಂದುಗಡೆಯಿಂದ ಯಾರೋ ಬಂದು ನನ್ನ ಕಂಣನ್ನು ಬಟ್ಟೆ ಯಿಂದ ಕಟ್ಟಿದರು. ಮತ್ತೆ ಯಾರೋ ಬಂದು ನನ್ನ ಬಾಯಿ ಗೆ ಬಟ್ಟೆಯನ್ನು ಗಿಡಿದರು. ಒಟ್ಟಿನಗೂಡೆಯೂ ಉದಕದ ಅಂಡೆಯ ನೀರಿನ ತಂಬಿಗೆಯ ಎಲ್ಲಿ ಎಲ್ಲಿಯೋ ಬಿದ್ದು ಹೋ ಯಿತು. ಇಬ್ಬರುಬಂದು ನನ್ನ ಕೈ ಕಾಲುಗಳನ್ನು ಕಟ್ಟಿ ಎತ್ತಿಕೊಂಡು ಹೋದರು. ಕೊನೆಗೆ ಇಲ್ಲಿಗೆ ಕರೆದುತಂದು ಕಂಣಬಿಚ್ಚಿದರು. ನೋಡಿದರೆ ಮದುವೇಸಾಮಾನೆಲ್ಲಾ ಸಿದ್ಧ ವಾಗಿದೆ. ನನಗೆ ಇಂಧಾ ವಿಪತ್ತು ಬಂತು, ಎಂದು ದುಃಖ ಪಟ್ಟಳು. ಅದಕ್ಕೆ ನಾನು-ಅಮ್ಮ ನಿನ್ನ ಗಂಡ ಮಕ್ಕಳು ಇರು