ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ ಮಾಡಿದ್ದು ಮಹಾರಾಯ. ಯಾಗಿ ಊಟಾ ಮಾಡಿಕೊಳ್ಳೋಣವೆಂದು ಒಬ್ಬೊಬ್ಬರಾಗಿ ಹೊರ ವರು, ಸದಾಶಿವದೀಕ್ಷಿತನು ಸ್ನಾನಮಾಡುತಿದ್ದನು. ಆಗ ಪಾರ ತಮ್ಮ ನು ನುಗನಿಗೆ , ನೀರನ್ನು ತುಂಬಿ ಕೊಡತಾ ಅವನನ್ನು ಕುರಿತು ಮತ್ತು ಅಮ್ಮು ಹಂಗಣೆ ಸಾಕಾಗಿದೆಯಪ್ಪ; ಈವೂ ರಿಗೆ ನಾವು ಬಂದದ್ದು ಹಂಗಿನ ಕೂಳ ತಿನ್ನುವಹಾಗಾಯಿತು. ಬಾಯಿ ಹಿಡಿಯದ ಮಾತನ್ನೆಲ್ಲಾ ಆಡುತಾಳೆ, ಇವಳ ಸಂಗ ಡ ಹೊಡ ಚಂಡಲ ಹತ್ತಿ ನನಗೆ ಬೇಜಾರಾಗಿದೆ. ಮೈಸೂರಲ್ಲಿ ನಾವು ತಿರಕೊಂಡು ತಿನ್ನುತಿದ್ದದೇನು ? ಇಲ್ಲಿಗೆ ಬಂದಮೇಲೆ ಇವರ ಅಪ್ಪನನನೇ ಐಶ್ವರವನ್ನೆಲ್ಲಾ ನಾವು ಹೊತ್ತುಕೊಂ ಡು ಹೋದ್ದೇನು ? ಹೇಗಾದರೂ ಆಗಲಿ ; ಮತ್ತೊಬ್ಬರನನೆ ಯಲ್ಲಿರುವುದು ನನಗೆ ಮಾನವಲ್ಲ. ಈ ಊರಿಗೆ ನಾವು ಬಂದ ದ್ದು ನನಗೆ ಆಗಿ ಬರಲಿಲ್ಲ. ಹಳ್ಳಿಗಾಡವಾಸ ನಮಗೆ ಸಲ ಸಿಗೆ ಇಲ್ಲ. ಮೊದಲಿನಿಂದಲೂ ಹಾಗೆಯೇ ಇನ್ನೇನು ರತ್ನ ದಂಧಾ ಹುಡುಗಿಯನ್ನು ತಂದು ಕಾಡುವಾಲುಮಾಡಿ ಬಿಡು ತೇವೆ. ಇನ್ನೆಲ್ಲಾ ಒಂದುಗಳಿಗೆ ಎರಡುಗಳಿಗೆಯೋ, ಆ ಷ್ಟರಲ್ಲಿಯೇ ಇದೆ. ಇಂಧಾ ಕಾಲದಲ್ಲಿಯೂ ಇವಳು ಹೀಗಾ ಡುವುದು ನೋಡಿದವರಿಗೆ ತಾನೆ ಚೆನ್ನಾಗಿರುತ್ತೆಯೆ ? ಬಂದಿ ರುವುದು ಅಸವಲ್ಲದರೊಗ, ಹಿಂದೆ ಕೇಳಲಿಲ್ಲ. ಮುಂದೆ ಕೇಳು ವುದಿಲ್ಲ. ಈಗಲೂ ಇವಳು ಹೀಗಾಡುತಾ ಬಂದರೆ, ಇವಳೇ ಏನೋ ಮಾಡಿಬಿಟ್ಟಳು ಎನ್ನುತಾರೋ ಇಲ್ಲವೊ ? ಈಶ್ವರಬಲ್ಲ ಯಾರ ಯಾರ ಮನಸ್ಸು ಹೇಗೆ ಹೇಗೆ ಇರುವುದೊ ! ನಮ್ಮ ಮನಸ್ಸು ಕಳಂಕವಿಲ್ಲದ್ದಾಗಿದ್ದರೆ ಸರಿ, ಅದೇನಾದರೂ ಆಗಲಿ, 36