ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


එප ಮಾಡಿದ್ದು ಸ್ಟೋ ಮಹಾರಾಯ. ಇನ್ನು ಮೇಲೆ ನಾನು ಈ ಊರಲ್ಲಿರುವುದಿಲ್ಲ. ನಮರಿಗೆ ಹೋ ಗೋಣ. ಇಲ್ಲದಿದ್ದರೆ ನನ್ನೊಬ್ಬಳನ್ನಾದರೂ ಕಳುಹಿಸಿಬಿಡು. ಪಶುಪತಿ ಮನೆಯಲ್ಲಿರುತೇನೆ. ಬೆನ್ನಲ್ಲಿ ಬಿದ್ದ ತನ್ನ ಒಂದು ತುತ್ತು ಅನ್ನ ಒಪ್ಪತ್ತು ಹಾಕಲಾರನೆ ? ಸಾಯುವ ಕಡೆಗಾಲ ಕೈ ಹಂಗಿನಕೂಳು ಇಲ್ಲದೆ ಮರುದಿನವಾದರೂ ಇರೋಣ, ಮೈಸೂರಿಗೆನಡೆ, ಎಂದು ಕಂಣಿನಲ್ಲಿ ನೀರಹಾಕುತಾ ಎಂದಳು, ಆಗ ಸದಾಶಿವದೀಕ್ಷಿತನು ತಾಯಿಯನ್ನು ಕುರಿತು ಅನ್ನು ನಾನು ಎಲ್ಲವನ್ನೂ ಬಲ್ಲೆ. ಈಗ ಆಡಿ ಪ್ರಯೋಜನವಿಲ್ಲ. ನೀನು ಹೇಳಿ ದ್ದೆಲ್ಲಾ ನನಗೂ ಗೊತ್ತಾಗಿದೆ. ನೀನು ಬಾಯಲ್ಲಿ ಆಡುತೀ ಯ, ನಾನು ಒಳಗೇ ಕೊರೆದುಕೊಂಡು ಪೇಚಾಡುತೇನೆ. ಈ ಊರಬಿಟ್ಟು ಹೋಗಬೇಕೆಂದು ನನ್ನ ಮನಸ್ಸಿನಲ್ಲಿಯೂ ಇದೆ. ಅದಕ್ಕೆ ಸಮಯ ಬರುತ್ತೆ. ಅದುವರೆಗೆ ಬಂದದನ್ನೆಲ್ಲಾ ಅನುಭ ವಿಸಿ ತೀರಬೇಕು, ಎಂದು ತಾಯಿಗೆ ಸಮಾಧಾನ ಹೇಳಿದನು. ಎಲ್ಲರೂ ಜಾಗ್ರತೆಯಾಗಿ ಮಡಿ ಉಟ್ಟುಕೊಂಡು, ಎಲೇ ಮುಂದೆ ಕೂತ ಶಾಸ್ತ್ರ ಮಾಡಿದರು, ಕಂಣಿಗೆ ಒಂದು ತುತ್ತು ಮೂಗಿಗೆ ಒಂದುತುತ್ತು ಹಾಕಿಕೊಂಡು ಎದ್ದು ಕೈ ತೊಳೆದುಕೊಂಡುಹೋಗಿ ನೋಡುವಾಗ್ಗೆ ಸೀತಮ್ಮನ ಸ್ಥಿತಿ ಅಸ್ತಾವಸ್ಥೆಯಾಗಿತ್ತು. ಮ. ನೆಯವರೆಲ್ಲರೂ ಬಂದು ನೋಡಿದರು. ಆಗ ತಿಮ್ಮನ್ನ ನುಎಲೆ ಮಗು ಸಾಕಿ, ನೀನು ಅಲ್ಲಿಗೆ ಹೋಗಬೇಡಮ್ಮ. ಹದ - ರಿಕೊಂಡೀಯ, ಇಲ್ಲಿಗೆ ಬಾ ಎಂದು ಮಗಳನ್ನು ಕೂಗಿದಳು. ಪಾರತಮ್ಮ ನು ಸೀತನ ಬಾಯಿಗೆ ನೀರನ್ನು ಹಾಕಿದಳು. ಆ ನೀರು ಕಟವಾಯಲ್ಲಿ ಸುರಿದು ಹೋಯಿತು. ತಟ್ಟನೆ ಮೈ