ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಮಾಡಿದ್ದು ಮಹಾಶಯ. ಕೈಯೆಲ್ಲಾ ತಂಣಗಾಯಿತು. ಕೈಯಲ್ಲಿ ನಾಡಿಸಿಕ್ಕಲಿಲ್ಲ. ತುಯು ತಾ ಇದ್ದ ಶ್ವಾಸ ಒಂದು ಸಾರಿ ಗೊಿಂದ ಹಾಗಾಯಿತು. ಹಾಗೆಯೇ ನಿಂತು ಹೋಯಿತು. ರುದ್ರನಾಡಿ ಹಿಡಿದು ನೋ ಡಿದರು. ಅದೂ ನಿಂತು ಹೋಯಿತು. ಎಲ್ಲಾ ಮುಗಿದುಹೋ ಯಿತು. ಮನೆಯವರೆಲ್ಲರೂ ಗೊಳೋ ಎಂದು ಅಳುವುದಕ್ಕೆ ಮೊದಲು ಮಾಡಿದರು. ಸೀತಮ್ಮ ನ ಮಗುವಾದ ಕೃಷ್ಣಸ್ವಾ ಮಿಯು ದಿಗಲಿನಿಂದ ತಾನೂ ಅಳುವುದಕ್ಕೆ ಮೊದಲುಮಾಡಿ ತು. ತಾಯಿಯ ಹತ್ತಿರ ಕೂತುಕೊಂಡು, ಅಮ್ಮ ಅಮ್ಮ, ಹು ಹ್ಯು, ಎನ್ನು ತಾ ಅವಳ ತುಟಿ ಬಿಡಿಸುವುದು, ಎದೆಯ ಮೇಲೆ ಬಿದ್ದುಕೊಳ್ಳುವುದು ಸೆರಗ ತೆಗೆಯುವುದು, ಸೀರೇ ಎಳೆಯುವುದು, ಅಳುವುದು, ಹೀಗೆಲ್ಲಾ ಮಾಡುತಿತ್ತು. ಇದನ್ನು ಕಂಡು ಎಲ್ಲರಿಗೂ ದುಃಖ ಇನ್ನೂ ಹೆಚ್ಚಿತು. ಆ ಗೋಳಿನಲ್ಲಿ ಪಾಶ್ವತಮ್ಮ ನಿಗೆ ಏನೂ ಬೇಕಾಗಲಿಲ್ಲ. ವೆಂಕ ಮೃ ನು ಕೇವಲ ಮುದುಕಿ, ಕೈಹಿಡಿದು ಇಬ್ಬರು ಎಬ್ಬಿಸ ಬೇಕು. ಆ ಸ್ಥಿತಿಯಲ್ಲಿದ್ದಳು. ತಿಮ್ಮಮ್ಮನು ಹೆಣದ ಸಮಾ ಸಕ್ಕೆ ಬರಲಿಲ್ಲ. ಆ ಹಸುಳೆಯ ದುಃಖವನ್ನು ನೋಡಲಾ ರದೆ ಸದಾಶಿವದೀಕ್ಷಿತನು ಮಗುವನ್ನು ಎತ್ತಿಕೊಂಡನು. ನಾ ಲ್ಯಾರು ತಿಂಗಳು ಅನ್ನ ನೀರು ಇಲ್ಲದಿದ್ದಾಗ್ಯೂ ಸೀತಮ್ಮ ನಿಗೆ ಮುಖ ಕೆಟ್ಟಿರಲಿಲ್ಲ, ಮೈ, ಕುಂದಿರಲಿಲ್ಲ. ನೋಡಿದವ ರೆಲ್ಲಾ-ಅಯ್ಯೋ ಗಾಬರಿ ಮಾಡಬೇಡಿ, ಮುಖ ಕೆಟ್ಟಿಲ್ಲ, ಪ್ರಾಣವಿದೆ, ಮೂರ್ಛ ಹೋಗಿರಬಹುದು ಎನ್ನುತಾ ಬಂದರು. ಸಾಕಿಯು-ಅಮ್ಮ ಅತ್ತಿಗೆ ಸತ್ಯ ಹಾಗೆ ಇಲ್ಲ, ನಿದ್ರೆ ಮಾಡು