ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9ರಳಿ ಮಾಡಿದ್ದು ಮಹಾಶಾಯ, ತಾಳಮ್ಮ ಎಂದಳು. ಅಷ್ಟರಮಟ್ಟಿಗೆ ಮುಖ ಲಕ್ಷಣವಾ ಗಿತ್ತು. ಆ ಊರ ಜನರೆಲ್ಲಾ ಹೆಂಗಸರು ಗಂಡಸರು ಆದಿ ಯಾಗಿ ಬಂದು ನೆರೆದರು. ಈ ಸೀತಮ್ಮ ಸತ್ತು ಹೋದಳೆಂದು ಕೇಳಿ ಸಮಾನ ಗ್ರಾಮದವರೆಲ್ಲಾ ಬಂದರು. ಆಗ ಪುರೋಹಿತರು ವಾಹಕರು ಮೊದಲಾದವರೆಲ್ಲರನ್ನೂ ದೀಕ್ಷಿತನು ಕರೆಸಿದನು. ಅಪರಕರ್ಮಕ್ಕೆ ಬೇಕಾದ್ದೆಲ್ಲಾ ಸಿದ್ಧವಾಯಿತು. ಜಾತ್ರೆಗೆ ತ್ರಿಪದಿ ನಕ್ಷತ್ರವಿರುತ್ತೆ. ಈಗಲೇ ಶವವನ್ನು ಸಾಗಿಸಿಬಿಡೋಣ. ಇವತ್ತು ಪೌರ್ಣಮಿ ರಾತ್ರೆ ಎಲ್ಲಾ ಬೆಳದಿಂಗಳಿದೆ, ವೈಶಾಖಮಾಸ, ಮಳೆ ಬರುತ್ತೆ ಎಂಬ ಭಯವೇನೂ ಇಲ್ಲ. ಈಗಲೇ ಶವವನ್ನು ಸಾಗಿಸಿಬಿಡೋಣ ಎಂದನು. ಚಿತಿ ಮೊದಲಾದ್ದು ಸಿದ್ಧವಾಯಿತು. ಹೆಣವನ್ನು ತೆಗೆದುಕೊಂಡು ಹೋಗಿ ಚಟ್ಟದಮೇಲೆ ಇಟ್ಟರು. ಮುತ್ತೆ ದೆಯಾದ್ದರಿಂದ ಮುಖವನ್ನು ಬಿಟ್ಟು ಮೈಗೆಲ್ಲಾ ಹೊಸಬಟ್ಟೆ ಯನ್ನು ಹೊದ್ದಿಸಿದರು. ಅರಿಸಿನವನ್ನು ತೊಡೆದು ಕುಂಕು ಮವನ್ನು ಇಟ್ಟು ಹೂವನ್ನು ಮುಡಿಸಿದರು. ರಾಹಕರು ಚಟ್ಟ ಕ್ಕೂ ಹೆಣಕ್ಕೂ ಹಗ್ಗವನ್ನು ಸುತ್ತುತಾ ಬಂದರು. ಆಗ ಪಾರ್ವತಮ್ಮ ನು ಆ ಶವದ ಹತ್ತಿರ ಬಂದು ಕೂತುಕೊಂಡು ದುಃಖಪಡುತಾ- ಆಯೊ ಸೀತ, ನಿನ್ನನ್ನು ಹೇಗಮ್ಮ ಕಾಡಿಗೆ ಕಳುಹಿಸಲಿ, ಪಶುಪತಿಗೆ ಏನಹೇಳಲಿ, ನಿನ್ನ ತಂದೆ ತಾಯಿ ಗಳ ದುಃಖವನ್ನು ಹೇಗೆ ಸಮಾಧಾನ ಮಾಡಲು ? ಲೋಕ ದಲ್ಲಿ ಇಲ್ಲದ ರೋಗವೇ ನಿನಗೆ ಬಂತಲ್ಲ ; ಮನೆಯಲ್ಲಿ ನಾವಿ ಬೃರು ಮುದುಕರು ಇದ್ದೆ ವು. ಹಳ ಜವರಾಯ .ನಿನ್ನ ನ್ನು