ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಮಹಾರಾಯ, ೨೯೧ ಹೆಸರನೂ ದೇವತೆಗಳ ಹೆಸರನೂ ಹೇಳುತಾ ಹಾಲ್, ಹೀ೦, ಹೂಂ, ಸಮಸ್ತಾಃ ಎನ್ನು ತಾ,-ಮುವತ್ತಮೂರು ಕೋಟಿ ದೇವತೆಗಳನ್ನು ಕಟ್ಟುವೆ: ಭೂತ, ಭೇತಾಳ, ಬ್ರ ಕ್ಕೆ ರಾಕ್ಷಸ, ಶಾಕಿನಿ, ಡಾಕಿನಿ, ಪ್ರೇತಪಿಶಾಚಗಳನ್ನು ಕಟ್ಟು ವೆ, ದುಷ್ಟರ ಕೈಕಟ್ಟುವೆ, ನೀಚರ ಮನವನ್ನು ಕಟ್ಟುವೆ, ಓಂ ಸಮಸ್ತಾಃ, ಓಂ ಪಟುಸತಿ, ಓಂ ಸಮಸ್ತಾಃ; ಹೀ ಗೆಂದು ಗಟ್ಟಿಯಾಗಿ ಕೂಗಿ ತರುವಾಯ ನಾಲ್ಕು ಕಲ್ಲನ್ನೂ ಒಪ್ಪಿಗಿ ಮರಳನ್ನೂ ಹಿಡಿದು ನಂತರಿಸಿ ಈ ಕಲ್ಲನ್ನು ಹಿಡಿ, ಈ ಮರಳನ್ನು ಹಿಡಿ, ನೀನು ಧೈರ್ಯವಾಗಿ ಈ ತುಕೊ, ನಿನ್ನ ನಾಲ್ಕು ದಿಕ್ಕಿಗೂ ಈ ನಾಲ್ಕು ಕಲ್ಲನ್ನು ಎಸೆ, ಯಾವ ದಿಕ್ಕಿನಿಂದ ನಿನಗೆ ಭಯ ತೋರುತೊ ಆ ಕಡೆಗೆ ಒಂದೊಂದು ಚುಟಗಿ ಮರಳನ್ನು ಎಸೆಯುತಾ ಬಾ, ಎಂದು ಗಿರಿಯಣನಿಗೆ ಹೇಳಿದನು. ಕೂಡಲೇ ಆ ಮಹಾಮಂ ತ್ರವಾದಿಯು ಪನಃ ಹೊಳೆಗೆ ಹೋಗಿ ಸ್ನಾನಮಾಡಿ ಗಟ್ಟಿ ಯಾಗಿ ಮಂತ್ರವನ್ನು ಹೇಳುತಾ ಕೈಯಲ್ಲಿ ನೀರನ್ನು ತೆಗೆದು ಕೊಂಡು ಆ ಬೆಂಕಿಯ ಸುತ್ತಲೂ ಪ್ರದಕ್ಷಿಣೆ ಮಾಡಿ ನೀರನ್ನು ಸುತ್ತ ಕಟ್ಟಿ ತನ್ನ ಬಟ್ಟಿನ ನೀರನ್ನು ಆ ಬೆಂಕಿಯಮೇಲೆ ಹಿಂಡುವುದು, ಪುನಃ ನೀರಿನಲ್ಲಿ ಮುಳುಗುವುದು, ಪುನಃ ಜಟ್ಟಿನ ನೀರನ್ನು ಬೆಂಕಿಯಮೇಲೆ ಹಿಂಡುವುದು, ಹೀಗೆ ಮೂ ರುಸಾರಿ ಮಾಡಿ, ತನ್ನ ಬೆತ್ತದಿಂದ ನೆಲದಮೇಲೆ ಒಂದು ಚಕ್ರವನ್ನು ಬರೆದು ಅದರ ಮನೆಗಳಲ್ಲಿ ಏನೇನೋ ಬೀಜಾ ಕ್ಷರಗಳನ್ನು ಬರೆದು ಅದರ ಮುಂದೆ ತಾನು ಕೂತು ತನ್ನ ಬೆ