ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


0 ೨೯೨ ಮಾಡಿದಷ್ಟೂ ಮಹಾರಾಯ, ತ್ಯವನ್ನು, ಅದರಮೇಲೆ ಬಡಿಯುತಾ ನಂತರಿಸುವುದಕ್ಕೆ ಆ ರಂಭಿಸಿದನು. - ಅಯ್ಯೋ ! ಆಗ ನಡೆದ ಅದ್ಭುತವನ್ನು ಏನೆಂದು ನಿನ ರಿಸಲಿ ' ಈ ಲೋಕದಲ್ಲಿ ಏನೇನು ರಹಸ್ಯಗಳಿವೆಯೋ ಅವು ನಮಗೆ ಗೋಚರವಾಗುವುದಿಲ್ಲ. ಎಲ್ಲವೂ ಆ ಸರ್ವಜನಾದ ಪರಮೇಶ್ವರನಿಗೇ ಗೊತ್ತು. ಆ ಬೆಂಕೆಯಿಂದ ಹೊರಡುತ್ತಿದ್ದ ಕೂಗು ಸ೨ ಹೊತ್ತಿಗೆ ಹೋ ಎಂದು ಗಟ್ಟಿಯಾಯಿತು. ಆಗ ಗಿರಿಯಂಣನು ಭಯದಿಂದ ಕೆಟ್ಟ ಧ್ವನಿಯಲ್ಲಿ ಅರಿಚಿಕೊಂಡನು ಭವರಿಗೆ ತನ್ನ ಕೈಬೆತ್ರದಿಂದ ಅವನನ್ನು ಮೂರುಸಾರಿ ಸಿಮಾ- ಲು ಗಿರಿಯಂಣ ಸುಮ್ಮನೇ ಕೂತುಕೊಂಡನು. ಪು 8 ಆನಂದ ಭಟಜಿಯು ಸ್ನಾನಮಾಡಿ ನೀರು ಬುಟ್ಟಿನಿಂದ ಸೋರುತಾ ಇರಲಿಕ್ಕಾಗಿ ಮರುಬೊಗಸೆ ಜಲವನ್ನು ಬೆಂಕಿಯ ಮೇಲೆ ಎರೆಚಿ ಏನೋ ಮಂತ್ರವನ್ನು ಹೇಳುತಾ ಮೊದಲಿದ್ದ ಸ್ಥಳದಲ್ಲಿ ವೀರಾಸನವನ್ನು ಹಾಕಿ ಕೂತುಕೊಂಡನು. ಚಿತಿ ಯಕಡೆಗೆ ಮುಖ ಮಾಡಿಕೊಂಡನು. ಆಗ ಆಡುತಾ ಇದ್ದ ಮೋಡದಿಂದ ಬೆಳದಿಂಗಳು ಮಂಕಾಯಿತು. ಚಿತಿ ಅಲ್ಲಾಡಿತು. ಅದರಮೇಲೆ ಕೈಕಾಲು ಆಡಿದಹಾಗೆ ಗೋಚರವಾಯಿತು. ಅಲ್ಲಿ ಒಂದು ಮನುಷ್ಯ ಶರೀರ ಏಳುವಹಾಗೆ ಕಂಡಿತು. ಗಿರಿಯಂಣ ಪುನಃ ಕೆಟ್ಟ ಸ್ವರದಲ್ಲಿ ಅರಚಿಕೊಂಡು ಗಡಗಡನೆ ನಡುಗುತಾ ನಿಂತುಕೊಂಡನು. ಆಗಿನ ಸ್ಥಿತಿ ಎಲ್ಲಿ ಎಂಥವರಿಗೂ ಭಯವಾಗತಕ್ಕದೆ, ಮಧ್ಯರಾತ್ರೆ: ಸ್ಮಶಾನ ; ಮಹಾನಿಶಿ; ಮೇಲ್ ಮೋಡದ ಕತ್ತಲೆ ;