ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


# ಮಾಡಿದ್ದು ಮಹಾರಾಯ ತಾ ಇದ್ದ ಸೀತೆಯು ಬದುಕಿ ಈಚೆಗೆ ಬಂದಳು. ಆಗ ರಾತ್ರೆ ೨೫ ಘಳಿಗೆಯಾಗಿತ್ತು, ಭಟಜಿಯು ಪುನಃ ಸ್ನಾನವನ್ನು ಮಾಡಿ ಬೇರೇ ಬಟ್ಟೆಯನ್ನುಟ್ಟು ಸೀತಮ್ಮನ ವೃತ್ತಾಂತವನ್ನೆಲ್ಲಾ ಆಕೀ ಬಾಯಿಂದ ಸಂಕ್ಷೇಪವಾಗಿ ತಿಳಿದು ಕೊಂಡು ಅವಳನ್ನೂ ಗಿರಿಯಂಣನನ್ನೂ ಕರೆದುಕೊಂಡು ಊ ರೊಳಕ್ಕೆ ಪ್ರವೇಶಮಾಡಿ ಜೋಯಿಸರ ಮನೆ ಬಾಗಿಲಲ್ಲಿ ಕೂಗಿದನು; ಕದಾ ತೆಗೆಯಿರಿ ಎಂದನು, ಅವರ ಮನೆಯಲ್ಲಿ ಒಬ್ಬಿಬ್ಬರು ಕೂತಕಡೆಯಲ್ಲಿಯೇ ಸುರುಟಿಕೊಂಡಿದ್ದರು. ಸದಾ ಶಿವದೀಕ್ಷಿತ, ತಿಮ್ಮಮ್ಮ, ಮಹಾದೆ (ವ, ಇವರು ಮಾತ್ರ ಸೀತಮ್ಮನ ವಿಚಾರವನ್ನೇ ಮಾತನಾಡುತ್ತಾ ಹಲಬುತಾ ಕೂ ತಿದ್ದರು. ಒಂದು ಕಂಬದಲ್ಲಿ ದೀಪ ಉರಿಯುತಿತ್ತು. ಅಂ ಥಾ ಅವೇಳೆಯಲ್ಲಿ ಬಾಗಿಲಲ್ಲಿ ಕೂಗಿದವರು ಯಾರೆಂದು ಧ್ಯಾ ನಿಸಿದರು. ಮೈಸೂರಿನಿಂದ ಯಾರೋ ಬಂದಿರಬೇಕೆಂದು ಯೋಚಿಸಿ ಮಹಾದೇವನು ಎದ್ದು ಬಾಗಿಲತೆಗೆದನು. ಭಟಜಿ ಗಿರಿಯಂಣ ಸಹಿತ ಸೀತಮ್ಮ ನನ್ನೂ ಕರೆದುಕೊಂಡು ಒಳಕ್ಕೆ ನುಗ್ಗಿ ಹಜಾರದಲ್ಲಿ ಬಂದು ಕೂತುಕೊಂಡರು. ಬಿಳೀ ಪಂಚೆ ಯನ್ನು ಟ್ಟುಕೊಂಡಿದ್ದ ಸೀತಮ್ಮ ನ ಗುರುತು ಯಾರಿಗೂ ಸಿಕ್ಕ ಲಿಲ್ಲ. ರಾತ್ರೆ ಅನ್ನ ನೀರಿಲ್ಲದೆ ನಿದ್ರೆಯಿಲ್ಲದೆ ದುಃಖದಲ್ಲಿ ಇ ಆಯಮುಳುಗಿದ್ದ ಆ ಮನೆಯ ಜನರಿಗೆ ಯಾರನ್ನು ನೋಡು ವುದೂ ಬೇಕಾಗಿರಲಿಲ್ಲ. ದೀಪವಿದ್ದರೂ ಅದು ಎಲ್ಲಿಯೋ ಒಂದುಕಡೆ ಸಂಣಗೆ ಉರಿಯುತಿತ್ತು. ಸೀತಮ್ಮ ನು ಒಂದು ಕತ್ತಲೆಯಾಗಿರುವ ಮೂಲೆಯಲ್ಲಿ ಹೋಗಿ ನಿಂತು ಕೊಂಡಳು.