ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದು ಸ್ಫೋ ಮಹಾರಾಯ, ೨೯ ಕೂತುಕೊಂಡಳು. ಬೆಳಕು ಹರೆಯುತಬಂತು. ಭಟಜಿಯು ಒಳ ಕ್ಕೆ ಹೋಗಿ ದೀಕ್ಷಿತರವರೆ, ಬೆಳಗಾಯಿತು, ನಾವು ಹೊರಡ ಬೇಕು. ನನ್ನ ತಂಗಿಯ ಸೀರೆ ದಾರಿಯಲ್ಲಿ ಬರುವಾಗ್ಗೆ ಬೆಂಕಿಬಿದ್ದು ಸುಟ್ಟುಹೋಯಿತು. ನನ್ನ ಪಂಚೆಯನ್ನು ಕಟ್ಟಿಕೊಂಡಿದಾಳೆ. ಹೊರಗೆ ಹೊರಡುವುದಕ್ಕೆ ನಾಚಿಕೊಳ್ಳು ತಾಳೆ. ತನ್ನ ಸೊಸೆಯ ಒಂದು ಹಳೇ ಸೀರೆ ಅಪ್ಪಣೆಯಾ ದರೆ ಉಪಕಾರವನ್ನು ಮರೆಯಲಾರೆ. ತಾವು ಬಹು ಸತ್ಯವಂ ತರೆಂದು ಕೇಳಿ ಇಲ್ಲಿಗೆ ಬಂದೆವು, ತಾನಾಗಿ ನಾನಾ ಕಾಡಿದ ಹಾಗಾಗುತ್ತೆ. ಹಾಗೂ ನರಿ ಹೀಗೂ ಸರಿ, ದಾನಕ್ಕೆ ಸಕಾ ಅವಾಗಿದೆ. ನಾವೂ ಆರ್ತ ರಾಗಿದೇವೆ, ಎಂದು ವಿನಯವಾಗಿ ಹೇಳಿದನು. ಆಗ ದೀಕ್ಷಿತನು ವಾರ ತಮ್ಮ ನನ್ನು ಕುರಿತು ಅಮ್ಮ, ಆ ಹುಡುಗಿ ಉಟ್ಟುಕೊಳ್ಳುತಿದ್ದ ಒಂದು ಹಳೇ ಸೀರೆಯನ್ನೂ ಅದರ ಜೊತೆಗೆ ಅವಳ ಕುಪ್ಪಸವನ್ನೂ ಕೊಟ್ಟು ಬಿಡು, ಎಂದನು. ಅದೇ ಪ್ರಕಾರ ಆ ಮುದಿಕಿಯು ತಂದು ಭವಳಿಯ ಮುಂದಿರಿಸಿದಳು. ಆಗ ತಿನ್ನು ಮೃ ನು-ಅವಳಿದು ಈ ಸೀರೆಯನ್ನುಟ್ಟು ಕೊಳ್ಳುತಿದ್ದರೆ, ಇರಬೇಕು, ಇಲ್ಲದಿದ್ದರೆ ಇದು ಯಾತಕ್ಕೆ ? ಅದನ್ನು ನೋಡಿದಾಗಲೆಲ್ಲಾ ದುಃಖಪಡ ಬೇಕಾಗುತ್ತೆ. ಈ ಸೀರೆಯನ್ನುಟ್ಟುಕೊಂಡು ಅವಳು ಬರುತಾ ಇದ್ದರೆ ಸಾಕ್ಷಾತ್ ಆದಿಲಕ್ಷ್ಮಿಯೇ ಬರುತಾಳೊ, ಎನ್ನುವ ಹಾಗೆ ಇರುತಿದ್ದಳು. ಅಯ್ಯೋ ಅಯ್ಯೋ ! ಅಂಥಾ ರೂಪೋ ಆ ಗುಣವೋ ! ಇನ್ನೆ೦ದಿಗೆ ಕಂಡೇವು ! ತೆಗೆದುಕೊಳ್ಳಿಯಪ್ಪ, ಯಾರಾದರೂ ಪುಣ್ಯಾತ್ಮರು ಉಟ್ಟುಕೊಳ್ಳಿ, ನಾರ್ಧಕವಾಗಲಿ ಎಂದಳು. ಅದಕ್ಕೆ ಭಟಜಿಯು- ತಾಯಿ ತಮಗೇನು ಕಡನು? ೧