ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೦೦ ಮಾಡಿದ್ದು ಮಹಾರಾಯ, ಯಾತಕ್ಕೆ ದುಃಖಪಡುತ್ತೀರಿ. ಅಂಥಾ ಸೊಸೆಯೇ ಬರುತಾಳೆ ಎಂದು ಹೇಳುತಾ ಬಟ್ಟೆಯನ್ನು ತೆಗೆದುಕೊಂಡು ಸ್ವಲ್ಪ ಕುಂ ಕುಮವನ್ನು ಅದರ ಸಂಗಡ ಇಸುಕೊಂಡು, ನಡುವೆಗೆಹೋ ಗಿ ಸೀತಮ್ಮ ನಿಗೆ ಕೊಟ್ಟನು. ಅವಳು ಆ ಸೀರೆಯನ್ನುಟ್ಟು ಕುಪ್ಪುಸವನ್ನು ತೊಟ್ಟು ಕುಂಕುಮವನ್ನು ಹಣೆಗೆ ಇಟ್ಟು ಕೊಂಡಳು. ಇವಳು ನಡುವೆಯಲ್ಲಿಯೇ ಇದ್ದಳು. ಸ್ವಲ್ಪ ಹೊತ್ತಿನಲ್ಲಿಯೇ ಭದಳಿಯ ಗಿರಿಯಂಣನೂ ಒಳಕ್ಕೆ ಬಂದು ಕೂತುಕೊಂಡರು. ಸದಾಶಿವದೀಕ್ಷಿತನು- ಮತ್ತೇನು ಸ್ವಾಮಿ ? ಎಂದನು. ಭಟಜಿಯು ತನ್ನ ಸಂಗಡ ನಾನು ವಿಶೇಷವಾಗಿ ವಾದ ಮಾಡುವುದಿಲ್ಲ. ತನ್ನ ಸೊಸೆ ಸತ್ತು ಹೋದಳೆಂದು ತಾವು ಹೇಳಿದಿರಿ. ಹಾಗಾದರೆ ತಾವು ಹಾಗೆಯೇ ನಂಬಿಕೊ೦ ಡಿರಿ. ನನ್ನದೊಂದು ಮನುವೆ ಇದೆ, ಅದನ್ನು ಲಾಲಿಸಿ, ತನ್ನು ಮ ನೇ ಜನರನ್ನೆಲ್ಲಾ ಈಗ ಇಲ್ಲಿಗೆ ಕರೆಯಿಸಿ, ನಾನು ಒಂದು ಸಂಗತಿಯನ್ನು ಹೇಳುತ್ತೇನೆ ಎಂದನು. ಅದಕ್ಕೆ ದೀಕ್ಷಿತನು ತನ್ನ ಮನಸ್ಸಿನಲ್ಲಿ ಪದೇ ಪದೇ ಈ ಬ್ರಾಹ್ಮಣ ಹೀಗೆ ಹೇಳುತಾ ನಲ್ಲ ? ಯಾತಕ್ಕಾಗಿ ಹೀಗೆ ಹೇಳುತಾನೆ ? ಯಾವರೋಗವೂ ಇಲ್ಲ ದೆ ನನ್ನ ಹುಡುಗಿ ಸತ್ತದ್ದೇನೋ ತಿಳಿದೇ ಇದೆ. ಇದು ಭೀತಿ ಶಂ ಕೆಯೇ ಶಾಬರ ಪ್ರಯೋಗವೇ ಎಂಬ ವಿಚಾರ ಕುರಿತು ಮಂತ್ರ ವಾದಿಗಳನ್ನು ಕೂಡ ವಿಚಾರಿಸಿ ಗೊತ್ತು ಮಾಡಿತ್ತಷ್ಟೆ, ಈ ಬ್ರಾಹ್ಮಣ ಏನೋ ಹೀಗೆ ಕುಣಿಚಿ ಕುಣಿಚಿ ಹೇಳುತ್ತಾನೆ. ಹೀಗೆ ಆ ಗಂತುಕರಾಗಿ ಬರುವ ಜನರಲ್ಲಿ ಏನಾದರೂ ಮಹತ್ತುಗ ಳಿರುವುದುಂಟು. ಈತ ಏನು ಹೇಳುತಾನೋ ಪರೀಕ್ಷಿಸೋಣ