ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೦೩ ಮಾಡಿದ್ದುಣ್ಣೆ ಮಹಾರಾಯ, ಆಗ ಮನೆಯವರೆಲ್ಲರೂ ಆ ಮಹಾತ್ಮ ನಾದ ಭಟಜಿಗೆ ಏಕಕಾ ಲದಲ್ಲಿ ಸಾಷ್ಟಾಂಗವಾಗಿ ನನುಸಾರಮಾಡಿ-ಸಾಮಿ ನನ್ನು ಭಾಗದ ಪರಮೇಶ್ವರನು ತನ್ನ ರೂಮಿನಲ್ಲಿ ದಯಮಾಡಿದಾ ನೆ, ಎಂದು ಹತ್ತು ಬಾಯಲ್ಲಿ ಹೊಗಳಿದರು. ಕೂಡಲೆ ಅಪರಕರ್ಮಾದಿಗಳ ಆಚರಣೆಯಿಂದ ಅಶುಚಿ ಯಾಗಿ ಮನೆಗೆ ಸುಂಣದ ನೀರನ್ನು ಎರಚಿ, ಪುಣ್ಯಾವ ರ್ಚನೆಯನ್ನು ಮಾಡಿ, ವಸಿಷ್ಠ ವಾಮದೇವರಿಗೆ ಸಮಾನ ವಾಗಿ ಬಂದಿದ್ದ ಆ ಇಬ್ಬರು ಬ್ರಾಹ್ಮಣರಿಗೂ ವಿಶೇಷವಾಗಿ ಉಪಚರಿಸಿ, ದೀಕ್ಷಿತನು ಈ ಸಂಗತಿಯಲ್ಲವನ್ನೂ ಕುತುಸವಿಸ್ತಾರ ವಾಗಿ ಪಶುಪತಿ ನಂಬಶಾಹಿಗೆ ಕಾಗದವನ್ನು ಬರೆದು ಕಳು ಹಿಸಿದನು. ಸತ್ತುಹೋದ ಸೀತಮ್ಮನ್ನು ಬದುಕಿಬಂದಳು ಎಂಬ ವರ್ತಮಾನವು ಹೇಗೊ ಬೆಳಕು ಹರೆಯುವುದರೊಳಗಾಗಿ ಕಿ ವಿಯಿಂದ ಕಿವಿಗೆ ಬಿದ್ದು ಒಂದು ನಿಮಿಷದಲ್ಲಿ ಪರಿಮಳದ್ರವ್ಯ ದವಾಸನೆಯಹಾಗೆ ಊರಿಂದ ಊರಿಗೆ ಹರಡಿಕೊಳ್ಳುತಾ ಬಂ ತು, ಸೀತಮ್ಮನನ್ನು ಹೊತ್ತುಕೊಂಡು ಹೋದಾಗ ಎಷ್ಟು ಇತ್ತೋ ಅದಕ್ಕಿಂತ ಒಂದಕ್ಕೆ ಹತ್ತರಷ್ಟು ಜನ ಬಂದುಬಿ ಟಿತು. ಎಲ್ಲರೂ ಸೀತಮ್ಮನನ್ನು ನೋಡಿ ಆಶ್ಚಯ್ಯಪಟ್ಟು ಕೊಂಡು ಸ್ಥಳವನ್ನು ಬಿಟ್ಟು ಹೋಗಲಾರದೆ ಅವಳನ್ನು ಎಷ್ಟು ನೋಡಿದರೂ ದಣಿಯದೆ ಅವಳ ವಿಚಾರವನ್ನು ಎಷ್ಟು ಕೇಳಿದರೂ ತೃಪ್ತಿಯಾಗದೆ ಆಶ್ಮೀರದಲ್ಲಿ ಮುಳುಗಿದ್ದರು. ಜನ ಒಬ್ಬರಮೇಲೆ ಒಬ್ಬರು ಬರುತ್ತಲೇ ಇದ್ದರು. ಸದಾ ಶಿವದೀಕ್ಷಿತನು ಗಿರಿಯಂಣ ಭಟಜಿ ಇವರನ್ನು ವಿಶೇಷವಾಗಿ