ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#ok ಮಾಡಿದ್ದು ಮಹಾರಾಯ ಮನೆಯನ್ನೂ ರುಡತೀಮಾಡಿದರು; ಮನೆಗಳ ಹಾರನ್ನು ಎ ಆದರು, ಗೋಡೆಗಳನ್ನು ಕೆಡವಿದರು, ನೆಲವನ್ನು ಅಗೆದರು. ಅನೇಕ ಒಡವೆಗಳೂ, ವರಹಗಳೂ, ರತ್ನ ಪಡಿ ನಗಗಳೂ ಅಲ್ಲಲ್ಲಿ ಸಿಕ್ಕಿದವು. ಸಿದ್ಧವಾಜಿಯ ಮನೆಯಲ್ಲಿಯೂ ಗುಡಿ ಯಲ್ಲಿಯ ಲೆಕ್ಕವಿಲ್ಲದಷ್ಟು ಒಡವೆಯ ಹಣವೂ ಸಿಕ್ಕಿತು. ಬಾಯಲ್ಲಿ ಒಂದು ಹಲ್ವ ಇಲ್ಲದೆ ರಕ್ತ ಸೋರುತಾ ಮುಖ ವೆಲ್ಲಾ ಬಾತುಕೊಂಡು ಮೈ ಎಲ್ಲಾ ತರೆದುಹೋಗಿ ಮೇಲ ಕ್ಕೆ ಏಳಲಾರದೆ ಸಂಕಟಪಡುತಾ ಬಿದ್ದಿದ್ದ ಸಿದ್ಧವಾಜಿಯವ ರಿಗೂ ನಿಗಳ ಬಂಧನವಾಯಿತು. ಉವಾದಿ ನಾರಪ್ಪಯ್ಯ ನವರಿಗೆ ಕೈಕೋಳವಾಯಿತು. ಇದೂ ಒಂದು ಆಶ್ಚರ್ಯವಾ ಯಿತು. ಸರಕಾರದವರು ಇವರೆಲ್ಲರನ್ನೂ ಮಧ್ಯೆ ಬಿಟ್ಟು ಕೊಂಡು ಅಲ್ಲಿ ದೊರೆತ ನಗ ನಾಣ್ಯಗಳೆಲ್ಲವನ್ನೂ ಚೀಲಗಳಲ್ಲಿ ಹಾಕಿ ಮೊಹರು ಮಾಡಿ ಗಾಡಿಗಳ ಮೇಲೆ ಹೇರಿಸಿಕೊಂಡು ಎಲ್ಲಕ್ಕೂ ಬಾರಿನವರೂ ಕುದುರೆ ಸವಾರರೂ ಸುತ್ತಿಕೊಂಡು ಮೈಸೂರಿಗೆ ಹೋದರು. ಈ ಹಾಳ ಕಳ್ಳರ ಗುಂಪಿಗೆ ಸೇರಿ ಸರ್ಕಾರದವರ ಕೈಗೆ ಸಿಕ್ಕದೇ ಹೋದ ಜನರು ಕೆಲವರು ತಸಿ ಸಿಕೊಂಡು ಕಾಡುಪಾಲಾಗಿ ಓಡಿಹೋದರು. ಒಂದೆರಡು ದಿವಸದೊಳಗಾಗಿ ಊರೆಲ್ಲಾ ಹಾಳಾಯಿತು. ಈ ವದಂತಿ ಎಲ್ಲೆಲ್ಲಿಯ ಸುತ್ತಲೂ ಹತ್ತು ಗಾವುದದ ವರೆಗೂ ಹರಡಿ ಕೊಂಡಿತು. ತಮ್ಮ ನ್ಯೂ ಎಲ್ಲಿ ಹಿಡಿದುಕೊಂಡು ಹೋಗು ತಾರೋ ಎಂದು ಯಾವ ಊರವರೂ ಸಂಜನಾಡಿಯ ಕಡೆ ತಿರುಗಿ ಕೂಡಾ ನೋಡುವುದನ್ನು ಬಿಟ್ಟುಬಿಟ್ಟರು. ಅನ್ನು ನಗುಡಿಗೆ ದೀಪ ಹತ್ತಿಸುವವರು ಕೂಡ ಇಲ್ಲದೇ ಹೋದರು.