ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೬ ಮಾಡಿದ್ದು ಮಹಾರಾಯ, ಕೊಲ್ಲಾಪುರದ ಮಹಾಲಕ್ಷ್ಮಿಯು ಆ ಊರನ್ನು ಬಿಟ್ಟು ಬೇರೆ ಕಡೆಗೆ ಬಿಜಯಂಗೈದಳು. ಆಕಡೆ ನಗರದ ಅಮಲಾರ ರೂ ಕಿದಾರ ಹೆಡೆಮುನಿಯವರೂ ಇತರ ಕರಣಿ ಕರೂ ಗುಮಾನೆಯವರೂ ಹಳೇ ಶಾನುಭೋಗರೂ ದೇವರ ಪೂಜಾರಿಗಳೂ ಉವಾಧ್ಯಾಯರೂ ಉಳಿದ ಸಾಮಾಜಿ ಕರೂ ಮೋಹಿ೦ವಿಜಯ ಯಾತ್ರೆಗೆ ಸೇರಿದ ಚೋರಭದರೂ ಇವರೆಲ್ಲರೂ ಮೈಸೂರಿಗೆ ಹೋದರು. ಎಲ್ಲರಿಗೂ ನಸರು ಬಂದಿಯಲ್ಲಿಟ್ಟು ವಿಚಾರಣೆ ಮಾಡುವಾಗೈ ದಂಡಿನವರು ಸಂಜವಾಡಿಯಿಂದ ತೆಗೆಯಿಸಿಕೊಂಡು ಬಂದಿದ್ದ ನಗಗಳನ್ನು ದೇಶಾಂತರಗಳಿಂದ ಬಂದಿದ್ದ ಜನರು ನಮ್ಮ ದು ತಮ್ಮ ದು ಎಂದು ಗುರುತಿಸಿದರು. ವಿಚಾರಣೆ ಅನೇಕ ತಿಂಗಳು ಜರ ಗಿತು. ಈ ಕಳ್ಳರ ಗುಂಪಿನಲ್ಲಿ ಸಿದ್ಧವಾಜಿ ಮೊದಲಾದ ಜನರನ್ನು ನೀರಿನಮೇಲೆ ಕಳುಹಿಸಿದರು. ಉಳಿದವರಿಗೆ ಹತ್ತು ಹದಿನೈದು, ಇಪ್ಪತ್ತು ವರುಷಗಳ ವರೆಗೆ ಬಂದೀಖಾನೆ ಪ್ರಾ ಸ್ವಿಯಾಯಿತು. ಉವಾದ್ರಿ ನಾರಪ್ಪಯ್ಯನವರಿಗೂ ಇದುವರುಷ ಜ್ಞಾನಸುಂದರವಾಸ ಪ್ರಾಪ್ತಿಯಾಯಿತು. ಇದಕ್ಕೆಲ್ಲಾ ಒಳಗಾ ಗಿದ್ದ ಸರ್ಕಾರದ ಉದ್ಯೋಗಸ್ಕೃರು ಕೆಲವರಿಗೆ ಬಂದೀಖಾನೆಯಾ ಯಿತು. ಉಳಿದ ಕೆಲವು ಜನರನ್ನೆಲ್ಲಾ ಬಿಟ್ಟು ಬಿಟ್ಟರು. ಇತ್ಯ ಸಂಜನಾಡಿಯಲ್ಲಿ ಸದಾಶಿವದೀಕ್ಷಿತ ಪಶುಪತಿ ನಾಂ ಬಶಾಸ್ತಿ ಮೊದಲಾದವರು ಭವದಿ ಗಿರಿಯಂಣ ಇವರಿಬ್ಬ ರಿಗೂ ಹೆಚ್ಚಾದ ಉಪಚಾರವನ್ನು ಮಾಡಿ ನಾಲೈದು ದಿನ ಸ ತಮ್ಮ ಮನೆಯಲ್ಲಿಯೇ ಇರಿಸಿಕೊಂಡಿದ್ದರು. ತರುವಾಯ ಒಂದುದಿನ ಅವರಿಗೆ ಔತನಮಾಡಿ ಬೇಕಾದ ಉಡುಗರೆಯನ್ನೂ