ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೦ ಮಾಡಿದ್ದು ಣೋ ಮಹಾರಾಯ, ನರನ್ನಾಗಿಯೇ ಭಾವಿಸಬೇಕಾಯಿತು. ಅದು ಅಂತಿರಲಿ. ಇನ್ನೊಂದು ವಿಷಯವೇನೆಂದರೆ, ತನ್ನ ಪ್ರಭಾವವು ಕೃಷ್ಣ ರಾಜಪ್ರಭುಗಳ ಆಸ್ಪ್ಯಾನದಲ್ಲಿ ವಿಶೇಷವಾಗಿ ಪ್ರಸ್ತಾಪಿಸಲ್ಪ ಓತು. ತನ್ನಂಥಾ ಮಹಾತ್ಮರ ದರ್ಶನವನ್ನು ಮಾಡ ಬೇಕು ಎಂದು ದೊರೆಯು ಅಪೇಕ್ಷಿಸಿ ತನ್ನ ನ್ನು ಕರೆದು ಕೊಂಡು ಹೋಗುವುದಕ್ಕಾಗಿ ನನ್ನನ್ನು ಕಳುಹಿಸಿದರೆ, ಖಂಡಿತ ವಾಗಿಯೂ ತಾವು ಮೈಸೂರಿಗೆ ದಯಮಾಡಿಸಬೇಕು. ಪ್ರಭು ಗಳ ಭೇಟಿಯನ್ನು ಮಾಡಿಕೊಂಡು ತರುವಾಯ ತಾವು. ಎಲ್ಲಿಗೆ ಬೇಕಾದರೂ ತೆರಳಬಹುದು, ಎಂದನು. ಅದಕ್ಕೆ ಭಟಜಿಯು- ಇದು ಆಗಲಾರದು, ರಾಜಾಸ್ತಾನದಲ್ಲಿ ನನ ಗೇನೂ ಕೆಲಸವಿಲ್ಲ. ಅಲ್ಲಿಗೆ ಬಂದಮೇಲೆ ಅವರು ಹೇಳಿ ದಂತೆ ಕೇಳಬೇಕಾಗುವುದು. ಇಂಥಾ ಸಂದರ್ಭ ದಲ್ಲಿ ಏನಾದರೂ ಮರ್ಯಾದೆ ನಡೆಯುವುದು. ಅದನ್ನು ಅಂಗೀಕರಿಸದಿದ್ದರೆ ಆ ಮಹಾ ಪದವಿಗೆ ಅವಮಾನಮಾಡಿದ ಹಾಗಾಗುತ್ತೆ. ಅ೦ ಗೀಕಾರ ಮಾಡಿದರೆ ನನ್ನ ಗುರುಗಳ ಆಳ್ಮೆಯನ್ನು ಮಾರಿ ದಂತಾಗುತ್ತೆ. ಮೇಲಾಗಿ ಅಂಧಾ ಮಹಾಸ್ಥಳಕ್ಕೆ ಹೋಗುವ ಮಟ್ಟಿನ ಯೋಗ್ಯತೆ ನಮಗೆ ಇದೆಯಲ್ಲಾ ಎಂಬ ದುರ ಹಂಕಾರವು ನನಗೆ ಒಂದು ನಿಮಿಷಮಾತ್ರವಾದರೂ ಹತ್ತು ವುದು. ಅಂಥಾ ಅಹಂಕಾರ ಹುಟ್ಟಿದ ಗಳಿಗೆಯಲ್ಲಿಯೇ ನಮ್ಮ ಶಕ್ತಿ ಕುಂದಿ ಹೋಗುವುದು, ಆದ್ದರಿಂದ ನಾನು ಮೈಸೂರಿಗೆ ಬರುವುದಿಲ್ಲ, ಎಂದನು. ಪುನಃ ಪಶುಪತಿ ಸಾಂಬಶಾಸ್ಮಿಯು ತನ್ನ ಮನೋನಿಶ್ಚಯಕ್ಕೆ ಯಾವರೀತಿಯ ಲ್ಲಿಯ ಕುಂದಕ ಬಾರದಂತೆ ನೋಡಿಕೊಳ್ಳುವ ಭಾರ ನನ