ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೧ ಮಾಡಿದ್ದುಣೋ ಮಹಾರಾಯ, ಗಿರಲಿ, ಖಂಡಿತವಾಗಿ ತಾವು ಮೈಸೂರಿಗೆ ದಯಮಾಡಲೇ ಬೇಕೆಂದು ಹೇಳಿದನು. ಇದೆಲ್ಲವನ್ನೂ ಕೇಳಿ ಆ ದಿವಸ ರಾತ್ರೆ ಗಿರಿಯಂಣ ಭಟಜಿಯೂ ಅವರ ಮನೆಯನಡುವೇ ಜಗಲಿಯ ಮೇಲೆ ಮಲಗಿಕೊಂಡರು. ಬೆಳಗಾದಮೇಲೆ ನೋ ಡುವಾಗ ಬೀದಿಯ ಬಾಗಿಲು ಅರಕದಾ ತೆಗೆದಿತ್ತು. ಆ ಬ್ರಾಹ್ಮಣರಿಬ್ಬರೂ ಅಲ್ಲಿರಲಿಲ್ಲ. ಎಷ್ಟು ಹುಡುಕಿಸಿದಾಗ್ಯೂ ಸಿಕ್ಕಲಿಲ್ಲ. ಇಂಥಾ ಮಹಾತ್ಮ ರು ಹೊರಟು ಹೋದರಲ್ಲಾ ಎಂದು ಎಲ್ಲರೂ ಪೇಚಾಡಿಕೊಂಡರು. - ಸಂಜನಾಡಿಯೆಲ್ಲಾ ಮೂರು ದಿವಸದಲ್ಲಿ ಹಾಳ ಊರಿ ನಂತೆ ಆಯಿತು. ಬಿದ್ದು ಹೋದ ಗೋಡೆಗಳು, ಮುರಿದು ಹೋದ ಹಾರುಗಳು, ಅಗೆದು ಗುಂಡಾಂತರ ಮಾಡಿದ ನೆಲ, ತೆರೆದ ಬಾಗಿಲು, ಒಡೆದ ಮಡಕೇಸಾಲು, ಯಾವ ದಿಕ್ಕಿನಲ್ಲಿ ನೋಡಿದರೂ ಹಾಳುಹಾಳು ಸುರಿಯುತಾ ಇತ್ತು. ಆ ಊರ ಜನರೆಲ್ಕಾ ದಿಕ್ಕಾಪಾಲಾದರು. ಒಂದೆರಡು ಮನೆಯಲ್ಲಿ ಮಾತ್ರ ಕೈಲಾಗದ ಮುದುಕರು ಹತ್ತಿಕೊಂಡಿದ್ದರು. ಆ ಊರಲ್ಲಿದ್ದ ಬ್ರಾಹ್ಮಣರೆಲ್ಲಾ ಬೇರೆ ಊರಿಗೆ ಹೊರಟುಹೋಗಿ ಅಲ್ಲಿ ಸೇರಿಕೊಂಡರು. ಇಂಥಾ ಊರಲ್ಲಿ ಇನ್ನು ನಾವು ಇರುವುದು ಸರಿಯಲ್ಲವೆಂದು ಸದಾಶಿವದೀಕ್ಷಿತನೂ ಪಶುಪತಿ ಸಾಂಬಶಾಸ್ತ್ರಿಯೂ ನಿಷ್ಕರ್ಷೆ ಮಾಡಿಕೊಂಡು ಮಾರನೇದಿನ ಸವೇ ಸಾಮಾನುಗಳನ್ನೂ ಸಾಗಿಸಿಕೊಂಡು ಮನೆಯವರೆಲ್ಲ ರನ್ನೂ ಕರೆದುಕೊಂಡು ಮೈಸೂರಿಗೆ ಹೊರಟು ಹೋದರು. ಹದಿನೈದು ದಿವಸದೊಳಗಾಗಿ ಒಂದು ಪ್ರಾಣಿಯೂ ಇಲ್ಲದ ಹಾಗೆ ಊರೆಲ್ಲಾ ನಾಶವಾಯಿತು. ಪಶುಪತಿ ಸಾಂಬಶಾಸ್ತ್ರಿಯೂ