ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hy ಮಾಡಿದ್ದು ಣೋ ಮಹಾರಾಯ. ಸದಾಶಿವದೀಕ್ಷಿತನೂ ಪಶುಪತಿಶಾಸ್ತ್ರಿಯ ಕೂಡಿ ಅರಮನೆಗೆ ಹೋಗಿ ಅಂಬಾವಿಲಾಸದಲ್ಲಿದ್ದ ಮಹಾಸ್ವಾಮಿಗಳ ಭೇಟಿಯನ್ನು ಮಾಡಿಕೊಂಡರು. ದೊರೆ-ಏನು, ಸಿಡಿಲನುರಿ, ಯಾವಾಗಬಂದೆ ? ಸದಾಶಿವ ಈದಿನ ಪ್ರಾತಃಕಾಲಕ್ಕೆ ಒಂದೆ. ನಮ್ಮ ಮಾವಂದಿ ರಾದ ಜೋಯಿಸರು ದೈವಾಧೀನರಾದರು. ನಾನು ಹೋ ದಾಗ ಬಹಳ ಗಟ್ಟಿಯಾಗಿಯೇ ಇದ್ದರು. ಅನರ ರೋಗದ ಸ್ಥಿತಿ ಇಂಧಾದ್ದೆಂದು ನನಗೆ ಗೊತ್ತಾಗಲೇ ಇಲ್ಲ. ಸ್ವಲ್ಪ ಮಟ್ಟಿಗೆ ನಿತ್ರಾಣವಿತ್ತು, ನಾನು ಹೋದ ದಿವಸ ರಾತ್ರೆ ಸರಿಹೊತ್ತಿನಲ್ಲಿ ನನ್ನನ್ನು ಕೂಗಿ ತಮ್ಮ ಆದಾಯವೆಚ್ಚ ವೆಲ್ಲವನ್ನೂ ಹೇಳಿ “ ನನ್ನ ಮನೆಯನ್ನು ನೀನು ಉಳಿ ಸಬೇಕು, ಸಂಜನಾಡಿಯಲ್ಲಿಯೇ ನೀನು ಇದ್ದು ಗ್ರಹಕ ತ್ಯವನ್ನು ನೋಡಿಕೊ, ಇನ್ನು ಯಾರೂ ನನಗೆ ದಿಕ್ಕಿ ಲ್ಲ, ಎಂದು ಹೇಳಿ ನನ್ನ ಕೈಯನ್ನು ಅವರು ಹಿಡಿ ದುಕೊಂಡು ಇದ್ದ ಹಾಗೆಯೇ ಶ್ವಾಸತುಯ್ಯುವುದಕ್ಕೆ ಆರಂ ಭವಾಯಿತು. ಒಂದು ಗಳಿಗೆಯಲ್ಲಿ ಪ್ರಾಣಹೋಯಿತು. ದೊರೆ-ಅಯ್ಯೋ, ನೀಲಕಂಠತೋಯಿಸರು ದೈವಾಧೀನರಾದರೆ? ಅನೇಕ ಸಂಗತಿಗಳನ್ನೂ ಜ್ಯೋತಿಷದಲ್ಲಿ ಕೆಲವು ರಹಸ್ಯ ಗಳನ್ನೂ ನಾನು ಅವರಿಂದ ತಿಳಿದುಕೊಂಡೆ. ಒಳ್ಳೆಯೋ ಗ್ಯರು. ಅರಮನೇ ಓದ್ಯಾ೦ಸರ ಪಟ್ಟಿಗೆ ಅವರ ಹೆಸ ರನ್ನು ಸೇರಿಸಬೇಕೆಂದು ಮನಸ್ಸಿನಲ್ಲಿತ್ತು. ಚಾಮರಾಜನ