ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣೋ ಮಹಾರಾಯ, ೧ ಗರಕ್ಕೆ ಹೋದಾಗ ಜ್ಞಾಪಕಬರುವುದು, ಮೈಸೂರಿಗೆ ನಾ ನು ಬಂದಾಗ ಮರೆತುಹೋಗುವುದು, ಹೀಗೆಯೇ ಆಗು ತಾಬಂತು ನನ್ನಿಂದ ಅವರಿಗೆ ಯಾವ ಉಪಕಾರವೂ ಇ ಲ್ಲವಾಯಿತು. ನನಗೂ ಅವರಿಗೂ ಇದ್ದ ಮೈತ್ರಿಯನ್ನು ನೋಡಲಾಗಿ ನಮ್ಮಿಬ್ಬರಿಗೂ ಖಣಖಣೀಭಾವವಿಲ್ಲವೆಂದು ತಿಳಿಯಬೇಕಾಗಿದೆ. ಇನ್ನೇನೂ ತೋರುವುದಿಲ್ಲ. ಅವರ ಗೃಹಕೃತ್ಯದ ಪ್ರತಿಕೂಲಗಳನ್ನು ಬಲ್ಲೆ, ನಂಗ ಬೆಪ್ಪ, ಹೇಷ, ಇನ್ನು ಯಾರೂ ದಕ್ಷರಾದವರು ಇಲ್ಲ, ಇನ್ನು ಅವರ ಮನೆಯೇ ಹಾಳಾದಹಾಗಾಯಿತು. ಶಿಡಿಲಮರಿ, ನೀನು ಅಲ್ಲಿ ಹೋಗಿ ನಿಂತು, ಮನೆ ನಡೆಯುವಂತೆ ಮಾ ಕೈಯ್ಯ, ಅಗತ್ಯವಾದಾಗ ಬಾ, ಬೇಕಾದಾಗ ನಿನ್ನ ಸಂ ಬಳವನ್ನು ತೆಗೆದುಕೊ, ನನಗೂ ಜೋಯಿಸರಿಗೂ ಇದ್ದ ಸ್ನೇಹದಮೇಲೆ ದೃಷ್ಟಿಯಿಟ್ಟು, ಈ ಮಾತನ್ನು ನಡಿಸು. ವಿದ್ವಾಂಸರು ಹಳ್ಳಿಗಾಡನ್ನು ಸೇರುವುದಕ್ಕೆ ಅವರಿಗೆ ಮ ನಸ್ಸಿರುವುದಿಲ್ಲ. ಆದರೂ ನಿನ್ನನ್ನು ನಾನು ಬಲೆ, ನಿನ್ನ ಪಾಂಡಿತ್ಯಕ್ಕೇನೂ ಲೋಪವುಂಟಾಗುವುದಿಲ್ಲ. ಸದಾಶಿವ-ನಾನು ಅರಿಕೆ ಮಾಡಿಕೊಳ್ಳಬೇಕಾದ ಸಂಗತಿಯೆಲ್ಲಾ ಸನ್ನಿಧಾನದಲ್ಲಿಯೇ ಅಪ್ಪಣೆಯಾದಮೇಲೆ ಅದರಂತೆ ಶಿರಸಃ ವಹಿಸಿ ನಡೆಯುತ್ತೇನೆ. ಈ ಪ್ರಕಾರ ಆಪ್ಪಣೆಯನ್ನು ಹೊಂದಿ ಸದಾಶಿವದೀಕ್ಷಿತನೂ ಪಶುಪತಿ ಸಾಂಬಶಾಸ್ತ್ರೀಯ ಮನೆಗೆ ಬಂದರು. ಆಗ ದೀಕ್ಷಿತನು