ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ ಮಾಡಿದ್ದು ಣೋ ಮಹಾರಾಯ, ದೊರೆಗಳಿಗೆ ಹೆಚ್ಚಿನ ಅಭಿಮಾನವಿತ್ತು. ಚಾಮರಾಜನಗರಕ್ಕೆ ಸವಾರಿ ಹೋದಾಗಲೆಲ್ಲಾ ಯಾವುದೊಂದು ಕೆಲಸಕ್ಕೂ ರನು ಸೈಯ್ಯನನ್ನು ಕರೆ ಎಂದು ಸನ್ನಿಧಾನದಲ್ಲಿ ಅಪ್ಪಣೆಯಾಗು ತಿತ್ತು. ದೊರೆ ಕರೆಯಿಸಿದಾಗಲೆಲ್ಲಾ ಒಂದೊಂದುವೇಳೆ ರುಮಾ ಅನ್ನು ಹಿಂದುಮುಂದಾಗಿ ಇಟ್ಟು ಕೊಂಡು ಹೋಗುವುದು, ಅಂ ಗಿಯನ್ನು ತಳಮೇಲಾಗಿ ತೊಟ್ಟುಕೊಳ್ಳುವುದು, ಸೊಂಟವನ್ನು ಹರಹರಕಲಾಗಿ ಸುತ್ತಿಕೊಳ್ಳುವುದು, ಮುಖವನ್ನು ಏನೂ ಅರಿಯ ದವನಹಾಗೆ ಸೊಸೊವ್ವನಾಗಿ ಮಾಡಿಕೊಳ್ಳುವುದು, ಅವಸರ ಅವಸರವಾಗಿ ನಡೆಯುವುದು, ಹೆಚ್ಚಿನ ಹೊರೆಯನ್ನು ಅರಿಯ ದವನಹಾಗೆ ನಟಿಸುವುದು, ಅಪ್ಪಣೆಯಾದ ಕೂಡಲೆ ಬಹಳ ಅವ ಸರವಾಗಿ ಬಂದವನ ಹಾಗೆ ತೋರ್ಪಡಿಸಿ ದಾಸದಂಡವನ್ನು ಹಾಕುವುದು, ಯಾವ ಮಾತು ರಾಜರ ಮುಖದಿಂದ ಹೊರ ಬರೂ-ಮಹಾಸ್ವಾಮಿ, ಅಪ್ಪಣಿ ಆದಂತ ತಯಾರುಮಾಡಿ ದೇನು, ಏನು ಇದ್ದರೂ ಒಂದು ನಿಮಿಷದಾಗ ಮಾಡಿಸುಥೇನು, ಆಹಾ ! ಆಕ್ಷೇಪಣೆ ಏನದ ? ಆಹ, ಆಗಬಹುಂದು, ಛಲೋ ಅಪ್ಪಣಿ, ” ಎಂದು ಸಮಯಬಂದಹಾಗೆಲ್ಲಾ ಹೊಗಳುವುದು, ಈ ಪ್ರಕಾರ ನಟಿಸುತಾ ಇದ್ದ ಕಾರಣ, ಈ ರಮಣ್ಯಯ್ಯನು ಏನೂ ಅರಿತವನಲ್ಲ, ಒಳ್ಳೆಯವನು, ಸರ್ಕಾರದ ಕೆಲಸವನ್ನು ಶ್ರದ್ದೆ ಯಿಂದ ಬಹು ಚೆನ್ನಾಗಿ ಮಾಡತಕ್ಕವನು, ಎಂದು ದೊರೆಯು ಇವನಲ್ಲಿ ಬಹಳವಾಗಿ ಅಭಿಮಾನವನ್ನು ಇಟ್ಟುಕೊಂಡು, ಇವನ ನ್ನು ಬಹಳ ದಿವಸ ಆ ತಾಲ್ಲೂಕಿನಲ್ಲಿಯೇ ಇರುವಂತೆ ಅಪ್ಪ ಮಾಡಿಸಿದ್ದರು.