ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W ಮಾಡಿದ್ದು ಮಹಾರಾಯ, ೨೯ ತರಿಸಿಕೊಂಡು ಗಾಡಿಯಲ್ಲಿ ತುಂಬಿ ಊರಿಗೆ ಕಳುಹಿಸುತ್ತಿದ್ದರು. ಇದೂ ಅಲ್ಲದೆ ಆಮಿಾಲನು ಜವಳಿ ಅಂಗಡಿಯಿಂದ ಬೇಕಾದ ಬಟ್ಟೆಗೆ ಳನ್ನು ತರಿಸಿಕೊಂಡು ಉಪಯೋಗಿಸುತ್ತಿದ್ದನು. ಅದರ ಕ್ರಯವ ನ್ನು ಕೇಳುವುದಕ್ಕೆ ವರ್ತಕರು ಭಯಪಟ್ಟು ಸುಮ್ಮನೇ ಬಿಟ್ಟು ಬಿಡುತಿದ್ದರು. ಆಮಿಾಲರು Tಾಮಾಂತರಗಳಿಗೆ ೭೦ಟಿಯಾಗಿ ಹೋದಾಗ ವಿಷಯವಾಗಿ ಇವರು ನಡಿಸುತಿದ್ದ ಚರವನ್ನು ವಿವರಿಸಲು ಅಸಹ್ಯವಾಗುತ್ತೆ. ತಾಲ್ಲೂಕು ಕಚೇರಿಯ ಉದ್ಯೋಗ ಸ್ಟರು ಜನರಿಂದ ಕೂತರೆ ನಿಂತರೆ ಒಳಅಂಚವನ್ನು ವಸೂಲುವಾ ಡುತಾ ಧನಿಕರಾಗಿದ್ದರು. ಆದಾಗ್ಯೂ ಆಮಾಲಿನಿಗೆ ಬರುತಿದ್ದ ಈ ಚರಾದಾಯದಷ್ಟು ಇತರ ಉದ್ಯೋಗಸ್ಥರಿಗೆ ಬರುತ್ತಿರಲಿಲ್ಲವಾ ದ್ದರಿಂದ ಅವನಮೇಲೆ ಇವರೆಲ್ಲರಿಗೂ ದ್ವೇಷವು ಹೊಟ್ಟೆಯೊಳಗೇ ತುಂಬಿತ್ತು. ಹೀಗೆಲ್ಲಾ ಇದ್ದಾಗ್ಯೂ ದೊರೆಗಳ ದಯಕ್ಕೆ ಆಮಿಾ ಅನು ಪಾತ್ರನಾಗಿದ್ದ ಕಾರಣ ಇವನಮೇಲೆ ಯಾರೂ ಎದುರಿಗೆ ನಿಲ್ಲುತ್ತಿರಲಿಲ್ಲ. ಸಹಿಸುವದಕ್ಕೆ ಅಸಾಧ್ಯವಾದ ಒಳದುಃಖವು ಎಲ್ಲ ರಿಗೂ ಬೂದಿಮುಚ್ಚಿದ ಕೆಂಡದಹಾಗಿತ್ತು, - ಈ ಕೆಂಡವು ಹತ್ತಿಕೊಂಡು ದೊಡ್ಡ ಉರಿಯಾಗಿ ಏಳುವುದಕ್ಕೆ ಒಂದು ಸಮಯಬಂತು. ಆ ಸೀಮೆಯಲ್ಲಿ ಉಪ್ಪಲಿಗರು ಅಧ ವಾ ಮೇಲುಸಕ್ಕರೆಯವರು, ಪರಿವಾರದವರು ಅಥವಾ ತೊರೇರು, ಎಂದು ಎರಡು ಜಾತಿಯ ಒಕ್ಕಲಿಗರು ಇದಾರೆ, ಈ ಜಾತಿಯ ವರ ಮದುವೆ ಮುಂತಾದ ಕಾಲಗಳಲ್ಲಿ ಮಾಡುವ ಬೀದೀಮರ ವಣಿಗೆ ಪದ್ಧತಿಗಳ ಕುರಿತು ಇವರಿವರಿಗೆ ಬಹುದಿವಸದಿಂದಲೂ ವಿವಾದನಡೆಯುತ್ತಲೇ ಇದೆ. ಹೀಗಿರಲು, ಹಣಗಾರನಾದ ಒಬ್ಬ