ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಮಾಡಿದ್ದು ಮಹಾರಾಯ, ಮದನಕ್ಕಳಿಗೆ ದೃಷ್ಟಿ ತೆಗೆದುಹಾಕಿ ಆರತಿಅಕ್ಷತೆ ಮಾಡಬೇ ಕೆಂದು ನಿಷ್ಕರ್ಷೆಯಾಯಿತು. ಇವರಿಗೆ ಯಾವುದು ತಾನೇ ಅ ಸಾಧ್ಯ? ಸುಬೇದಾರರು ಅನುಕೂಲವಾಗಿದಾರೆ, ಇತರ ಉದ್ಯೋ ಗಸ್ಥರೆಲ್ಲಾ ಕೈವಶರಾಗಿದಾರೆ, ಕಿಲ್ಲೇದಾರರಂತು ತೊರೆಯರೆಂಬ ಮಹಾರಣ್ಯದಲ್ಲಿ ಮದಗಜವಾಗಿ, ಅನಾರ್ಗದಲ್ಲಿದ್ದ ಕೆಲವು ತೊ ರೇರ ಹೆಮ್ಮಕ್ಕಳ ಮಹಾಸಮಾಜದಲ್ಲಿ ಯಾವಾಗಲೂ ಲೋಲ ರಾಗಿರುವಾಗ್ಯ ತೊರೆಯರಿಗೆ ಯಾವುದು ಅಸಾಧ್ಯ? ಸುಬೇದಾರರು ಮನೆಯಲ್ಲಿಯೇ ಇದ್ದರು. ಕಿಲ್ಲೇದಾರರು ತನ್ನು ಕಂದಾಚಾರದವರನ್ನು ಕರೆದುಕೊಂಡು ಯಾವಗಲಾಠಿ ಇಲ್ಲದೆ ಮೆರವಣಿಗೆಯನ್ನು ಸರಿಯಾಗಿ ನಡೆಸಲು ತಮ್ಮ ಕುದು ರಯನ್ನು ಹತ್ತಿಕೊಂಡು ಹೊರಟರು. ಸುತ್ತಮುತ್ತಿನ ತೊರೆ ಕ ಕುಂಡಲಿಯಲಾ ಆದಿವಸ ಚಾಮರಾಜನಗರದಲ್ಲಿ ನೆರೆದು ನಿಂತಿತು. ಮುಂದೆ ಕೊಂಬು, ತಮಟೆ, ಅದರ ಹಿಂದೆ ರಣ ಭೇರಿ, ಅದರ ಹಿಂದೆ ಉತ್ತಮವಾದ ಓಲಗವನ್ನು ಮಾಡುವ ಎರಡು ಗುಂಪಿನ ಓಲಗದವರು, ಅವರ ಹಿಂದೆ ವಿಧವಿಧವಾದ ಬೆಲೆಯುಳ್ಳ ಒಟ್ಟಿಗಳನ್ನು ಹಾಕಿಕೊಂಡಿರುವ ಗಂಡಸರ ಗುಂಪು, ಅದರಹಿಂದೆ ಕಂದಾಚಾರದ ಜವಾನರಿಂದ ಆವ್ರತರಾಗಿ ಕುದುರೆ ಮೇಲೆ ಕೂತು ಬರುತಿರುವ ಕಿಳ್ಳೇದಾರ್ ಸಾಲಾರ್‌ಖರ್ಾಸಾ ಹೇಬರು, ಇವರ ಹಿಂದೆ ಮದಮಕ್ಕಳು ಕೂತಿರುವ ಹೂವಿನ ಪಲ್ಲಕ್ಕಿ, ಇದರ ಹಿಂದೆ ಬೇಕಾದ ಒಡವೆಗಳನ್ನಿಟ್ಟು ಬಗೆಬಗೇ ಸೀರೆಗಳನ್ನು ಟ್ಟು ಬೇಕಬೇಕಾದ ಸಿಸ್ತುಗಳನ್ನು ಮಾಡಿಕೊಂಡು, ಕನ್ನಡಿ ಕಳಶ, ಸುತ್ತು ವೀಳಯ, ತೆಂಗಿನಕಾಯಿ ಬಾಳೆಹಣ್ಣು