ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ ಮಾಡಿದ್ದು ನ್ಯೂ ಮಹಾರಾಯ, ಈಬಗೆ ತಟ್ಟೆಗಳನ್ನು ಹಿಡಿದು, ಹಾಡುಗಳನ್ನು ಹಾಡುತಾ ಬ ರುವ ತೊರತಿಯರ ಸಂಘ, ಇವರ ಹಿಂದೆ ಸಾದಾರಣ ಬಳ್ಳಿ ಗಳನ್ನೂ ಕಂಬಳಿಗಳನ್ನೂ ಹೊದ್ದು ಬರುತ್ತಾ ಇರುವ ಗಂಡ ಸರ ಹೆಚ್ಚಾದ ಗುಂಪು, ಇವುಗಳೆಲ್ಲಾ ಒರದರವಾದ ನಂ ದರವನ್ನು ತೋರಿಸುತಿದ್ದಾಗ್ಯೂ, ಮುಡಿದಿರುವ ಚೆಂಡುಮಲ್ಲಿಗೇ ಹೂವಿನ ವಾಸನೆ, ಕೈಯಣ್ಣೆಯ ಮಣಕು ವಾಸನೆ, ನೀರುಳಿ ಬೆಳ್ಳುಳ್ಳಿಯ ವ್ಯಗಳು ವಾಸನೆ, ಇದೆಲ್ಲವನ್ನೂ ಮುಚ್ಚು ತಾ ಇರುವ ಬೆವರ ವಾಸನೆ, ಇವುಗಳು ತುಂಬಿದ್ದ ಕಾರಣ ಇಂಥಾ ಗವನ್ನು ಎಂದಿಗೂ ಅರಿಯದವರ ಮೂಗು ಆಗಾಗ ನೆಟ್ಟ ಸೊಟ್ಟನಾಗುತಿತ್ತು, ಮೆರವಣಿಗೆಯು ಸುಬೇದಾರರ ಮನೆ ತಟಹಾದು ವೇಳೆ ಯವರೆಗೂ ಹೋಯಿತು. ಆಗ ಗುಂಪಿನೊಳಕ್ಕೆ ೧೦-೧೨ ಕಲ್ಲುಗಳು ಬಿದ್ದವು. ಜನ ಗಾಬರಿಯಾಯಿತು. ಕಲ್ಲು ಎಲ್ಲಿಂದ ಬಂತೋ ನೋಡೋಣವೆಂದು ಕಂದಾಚಾರದ ಜವಾನರು ಓಡಿ ಹೋದರು. ಆ ಸಮಯಕ್ಕೆ ಸರಿಯಾಗಿ ಕಲ್ಲಿನ ಮಳೆಯೇ ಸುರಿಯುವುದಕ್ಕೆ ಮೊದಲಾಯಿತು. ಮಧ್ಯೆ ಮಧ್ಯೆ ಪಾದರಕ್ಷೆಗಳು ಹೆಚ್ಚಾಗಿ ಬಿದ್ದವು. ಅಕಸ್ಮಾತಾಗಿ ನಾಲ್ಕು ದಿಕ್ಕಿನಿಂದಲೂ ಹಣೆಮಟ್ಟದ ದೊಣ್ಣೆಗಳನ್ನು ಹಿಡಿದಿರತಕ್ಕೆ ದುಂಡಾಳುಗಳ ಗುಂಪುಗಳು ನುಗ್ಗಿ ದವು, ಕಿಲ್ಲೇದಾರರ ಕುದುರೆಗೆ ಬಲವಾದ ಏಟು ಬಿದ್ದು ಅದರ ಕಾಲು ಮುರಿದು ಹೋಯಿತು. ಸಾಲಾರ ರ್ಖಾ ಸಾಹೇಬರು ಕೆಳಕ್ಕೆ ಬಿದ್ದರು. ಕೂಡಲೆ ಅವರಿಗೆ ದೊ ಜೈ ಪೆಟ್ಟುಗಳು ಬಲವಾಗಿ ಬಿದ್ದು ಕಾಲು ಮುರಿದು