ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಮಾಡಿದ್ದು ಮಹಾರಾಯ, ವಾಗಿ ಇದ್ದದರಿಂದಲೂ ಒಳ್ಳೆ ಸ್ವಭಾವದ ಸೂಚನೆಗಳನ್ನು ತೋರ್ಪಡಿಸುತಿದ್ದ ದರಿಂದಲೂ ಸಹಜವಾಗಿ ಹುಟ್ಟಿತು ಅಧಿ ಮಾನವೆನ್ನುವುದಕ್ಕೂ, ಸಂಬಂಧದಿಂದ ಹುಟ್ಟಿದ ಮಮತೆ ಎನ್ನುವುದಕ್ಕೂ ಕಾರಣವಿತ್ತು. ಈ ನಗುವಿಗೆ ಕೊಡದೇ ತಾ ನು ಯಾವ ತಿಂಡಿಯನ್ನೂ ತಿನ್ನುತಾ ಇರಲಿಲ್ಲ. ಮಗು ಊಟ ಮಾಡುವವರೆಗೂ ತಾನು ಊಟಮಾಡುತಾ ಇರಲಿಲ್ಲ. ಲಾಲಿಸಿ ದರೆ ಮಕ್ಕಳು, ಪೂಜಿಸಿದರೆ ದೇವರು, ಹೂಡಿದರೆ ಒಲೆ, ಕೂಡಿ ದರೆ ಗಂಡ, ಮಾಡಿದರೆ ಸಂಸಾರ, ಎಂಬ ಗಾಧೆಗೆ ಸರಿಯಾಗಿ ತಿನ್ನು ಮಾಡುತ್ತಾ ಇದ್ದ ಲಾಲನೆಯಿಂದ ಆ ಹುಡುಗನಿಗೂ ಅವಳಲ್ಲಿ ವಿಶೇಷವಾದ ಪ್ರೀತಿ ಇತ್ತು. ಮಗುವು ಚಿಕ್ಕಮ್ಮ ನೆಂದು ಕರೆಯುತ್ತಾ ಅವಳನ್ನು ಯಾವಾಗಲೂ ಎಡೆಬಿಡದೆ ಅವಳ ಹಿಂದೆಯೇ ಓದಿಾಡುತಾ ಇತ್ತು. ಮಹಾದೇವನಿಗೆ ಅಕ್ಷರಾಭ್ಯಾಸವಾಯಿತು. ಆವೂರಲ್ಲಿಯೇ ನಾರಪ್ಪಯ್ಯನೆಂಬ ಒಬ್ಬ ಬ್ರಾಹ್ಮಣನು ಒಂದು ಮಠವನ್ನು ಇಟ್ಟಿದ್ದನು. ಆ ಮರಕ್ಕೆ ಮಹಾದೇವನನ್ನು ಕಳುಹಿಸಿದರು. ಮಹಾರಾಷ್ಟ್ರವೂ ಈ ನಾರಪ್ಪಯ್ಯನಿಗೆ ಬರುತಿತ್ತು. ಈಗ ಇಂಗ್ಲಿಷ್ ಭಾಷೆ ಹೇಗೋ, ಆಗ ಮಹಾರಾಷ್ಟ್ರ ಅಥವಾ ಹಿಂದವಿಯು ಹಾಗೆ, ರಾಜಭಾಷೆ ಎನ್ನಿಸಿಕೊಂಡಿತ್ತು. ರಾಜ್ಯಭಾ ರದಲ್ಲಿ ನಡೆಯುತ್ತಿದ್ದ ಕಾಗದಪತ್ರಗಳೆಲ್ಲಾ ಹಿಂದವಿಯಲ್ಲಿಯೇ ನಡೆಯುತಿತ್ತು. ಸರ್ಕಾರದ ಉದ್ಯೋಗಗಳು ಹಿಂದವಿಬಲ್ಲವ ರಿಗೇ ಹೆಚ್ಚಾಗಿ ದೊರೆಯುತ್ತಿದ್ದವು. ಪುನಹ ಸಂಸ್ಥಾನದಲ್ಲಿ ಶ್ರೀ ಮಂತ ಬಾಜೀರಾಯರು ನೆಲೆಯಾಗಿ ನಿಂತು ಅನೇಕ 'ರಾಜ್ಯ