ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದುಣೋ ಮಹಾರಾಯ, ಗಳನ್ನು ಜೈಸಿ ಅಲ್ಲಿ ತಮ್ಮ ಠಾಣ್ಯವನ್ನು ಇರಿಸಿ ತಮ್ಮ ರಾಜ್ಯಭಾರಕ್ರಮವನ್ನೇ ಅಲ್ಲೆಲ್ಲಾ ಪ್ರಚಾರಕ್ಕೆ ತಂದರು; ದೊಡ್ಡ ನವಾಬನೆಂದು ಹೆಸರುಗೊಂಡಿದ್ದ ಹೈದರಲ್ಲಿಯು ಕೆಲವು ಮರಾಟೀ ಸೀಮೆಗಳನ್ನು ಜೈಸಿ ಮೈಸೂರು ರಾಜ್ಯವನ್ನೆಲ್ಲಾ ತನ್ನ ಸ್ವಾಧೀನಮಾಡಿಕೊಂಡು ತನ್ನ ಕಡೇ ಕರಣಿಕರನ್ನೆ ಇ ಟ್ಟು ಕೊಳ್ಳುವುದಕ್ಕೋಸ್ಕರವೂ, ಮರಾಟೆಯವರು ಲೆಕ್ಕಾಚಾರದಲ್ಲಿ ಬುದ್ದಿವಂತರೆನ್ನಿಸಿಕೊಂಡಿದ್ದದರಿಂದ, ಈ ಸೀಮೆಯ ಅಧಿ ಕಾರಗಳಿಗೆ ಅಲ್ಲಿನ ಜನರನ್ನು ಹೇರಳವಾಗಿ ತಂದನು. ಅವರು ಹಿಂದವಿಯಲ್ಲಿಯೇ ಸರ್ಕಾರದ ಕಾಗದಪತ್ರಗಳನ್ನು ಇಡುತಾಬಂ ದರು. ಈ ಭಾಷೆಯು ಟಿಪ್ಪು ಸುಲ್ತಾನನ ದಿವಸದಲ್ಲಿಯೂ ಕೃಷ್ಣ ರಾಜ ಒಡೆಯರವರ ರಾಜ್ಯಭಾರದಲ್ಲಿಯೂ ಮತ್ತೂ ವೃದ್ಧಿಗೆ ಬಂತು. ಆದ್ದರಿಂದ ಇದು ರಾಜಭಾಷೆ ಯೆನಿಸಿಕೊಂಡಿತ್ತು. ಆ ದನ್ನು ಕಲಿಸುವ ಉವಾಧ್ಯಾಯರಿಗೆ ಸಂತೋಜಿಗಳೆಂದು ಹೆಸರು. ಇತರ ಕನ್ನಡ ಉವಾಧ್ಯಾಯರಿಗಿಂತಲೂ ಇವರಿಗೆ ಗೌರವ ಹೆಚ್ಚಾಗಿತ್ತು. ಹುಡುಗರೂ ಸಹಿತ ಹೆಚ್ಚಾಗಿ ಬರುತಿದ್ದ ರು. ಪಂತೋಜಿಗಳ ವರಮಾನವೂ ಹೆಚ್ಚಾಗಿಯೇ ಇತ್ತು. ಈ ಮ ಠಗಳಿಗೆ ಸಾಲೆ ಎಂದು ಹೇಳುತ್ತಾರೆ. ಹೀಗಿರಲು, ಮಹಾ ದೇವನಿಗೆ ತಾರಾಬಲವನ್ನು ನೋಡಿ, ಒಳ್ಳೇ ದಿವಸ ಎಣ್ಣೆಶಾ ಸ್ವವನ್ನು ಮಾಡಿ ಎರೆದು ಹತ್ತುಗಂcಮೇಲೆ ಅಗ್ನಕ್ಕೆ ಹನ್ನೊಂದನೇ ಕಡೆ ಗುರು ಇರಲಿಕ್ಕಾಗಿ, ಅಕ್ಷರಾಭ್ಯಾಸವನ್ನು ಮಾಡಿಸಿದರು. ಮಧ್ಯಾಹ್ನ ಬ್ರಾಹ್ಮಣರಿಗೂ ಮುತ್ತೈದೇರಿಗೂ ಸಂತರ್ಪಣೆಯನ್ನು ಮಾಡಿ ರಾತ್ರಿ ಆರತಿ ಅಕ್ಷತೆ ಮಾಡಿ