ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಮಾಡಿದ್ದು ಣೋ ಮಹಾರಾಯ, ಉಂಡೆಚಕ್ಕುಲಿ ಬಾಗಿನವನ್ನು ಕೊಟ್ಟರು. ಮಹಾದೇವನು ದಿನ ಚರಿಯಲ್ಲಿಯೂ ಬೆಳಗ್ಗೆ ಮದ್ಯಾಹ್ನ ಸಹಾ ಮಠಕ್ಕೆ ಹೋಗಿ ಉಪಾಧ್ಯಾಯರು ಹೇಳಿದಹಾಗೆ ಕಲಿತುಕೊಳ್ಳುತ್ತಾ ಬಂದನು. ಎರುನುಂಟು ಮಾತು ಹಿಂಚು, ಎಂದುಕೊಂಡು ಹುಡುಗರನ್ನು ಯಾವಾಗಲೂ ಹೊಡೆದು ಹೆದರಿಸುತಾ ಪಾಠಗಳನ್ನ ಹೇಳು ತಾ ಇದ್ದ ಈ ಉವಾಧ್ಯಯನ ಕೈಯಿಂದ ಯಾವಾಗಲಾದರೂ ಮಹಾದೇವನಿಗೆ ಒಂದೊಂದು ಪೆಟ್ಟು ಬೀಳುತಿತ್ತು. ಈ ಪಂತೋಜಿಯು ತನ್ನನ್ನು ಹೊಡದಾಗ ಮಹಾದೇ ವನ ಕಣ್ಣಿನಲ್ಲಿ ಸಾಧಾರಣವಾಗಿ ನೀರು ಬರುತ್ತಾ ಇತ್ತು. ಆದರೆ ಇತರ ಹುಡುಗರನ್ನು ಹೊಡೆಯುವಾಗ ಅವರು ದುಃಖಪಡುವು ದನ್ನು ನೋಡಿ ಮಹಾದೇವನು ಬಹಳವಾಗಿ ಅಳುತ್ತಿದ್ದನು. ಇವನನ್ನು ಸಮಾಧಾನಮಾಡುವುದು ಕಷ್ಟವಾಗುತಿತ್ತು ಒಂದು ದಿನ ಸದಾಶಿವದೀಕ್ಷಿತನು ಮಗನನ್ನು ನೋಡಿ, ಸದಾಶಿವ-ಯಾಕೆ ನಗು, ನುರಕ್ಕೆ ಹೋಗುವುದಿಲ್ಲವೆ ? ಮಹಾದೇವ-ಸಂತರು ಹೊಡೆಯುತ್ತಾರೆ. ಸದಾ ನಿನ್ನನ್ನು ಹೊಡೆದರೆ ? ಯಾವಾಗ ? ಯಾಕೆ ? ಮಹಾ-ಭಾ ನ, ನನ್ನನ್ನು ಹೊಡೆದರೂ ಹೊಡೆಯಲಿ, ಎಲ್ಯಾಹು ಡುಗರನ್ನೂ ಹೊಡೆಯುತ್ತಾರೆ. ಆ ಹುಡುಗರು ಅಳುವುದ ನ್ನು ನೋಡಿದರೆ ನನಗೆ ಏನೋ ಸಂಕಟವಾಗಿ ಕಣ್ಣಿನಲ್ಲಿ ನೀರು ಬರುತ್ತೆ, ಸದಾ ಹುಡುಗರು ತಪ್ಪಿದರೆ ಹೊಡೆಯುತ್ತಾರೆ. ಮಹಾ-ಪಾಠ ಕೊಟ್ಟರೂ ಹೊಡೆಯುತ್ತಾರೆ ಇಲ್ಲದಿದ್ದರೂ ಹೊ