ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ಮಾಡಿದ್ದು ಣೋ ಮಹಾರಾಯ, ಹದಿನೆಂಟು ವರುಷದ ಒಬ್ಬ ಹುಡುಗನಿದ್ದನು. ಇವನು ಆಗಾ ಗ್ಯ ಮಠಕ್ಕೆ ಬಾರದೆ ತಪ್ಪಿಸಿಕೊಂಡು ಓಡಿಹೋಗುತಿದ್ದ ಕಾರ ಣ, ಇವನ ಕಾಲಿಗೆ ಒಂದು ಕಬ್ಬಿಣದ ಸರಪಣಿಯನ್ನು ಹಾ ಕಿ ಅದರ ಕೊನೆಗೆ ಒಂದು ಬಲವಾದ ಹುಣಸೇ ಕೊರಡನ್ನು ತಗಲಿಸಿದ್ದರು. ಇವನು ತುಂಟಹುಡುಗರಲ್ಲಿ ಅಗ್ರಗಣ್ಯನಾಗಿ ದ್ದನು. ಯಾವ ಕೆಟ್ಟತನಕ್ಕೂ ಗಣೇಶನಪೂಜೆ ಇವನದೇ ಆ ಗಿತ್ತು. ಈ ಸಂತೋಜಿಯ ಕೈಯಿಂದ ಬಗೆಬಗೆಯಾದ ಹಲ ವು ಶಿಕ್ಷೆಗಳನ್ನು ಹೊಂದಿ ಈ ಬಸವನ ಮೈ ಜೆಡುಕ ಹೋಗಿತ್ತು. ಇವನು ಇತರರನ್ನು ಕುರಿತು ಈ ಸರಪಣಿ ಯನ್ನೂ ಕೊರಡನ್ನೂ ಏನಾದರೂ ಮಾಡಿ ನೀವೆಲ್ಲಾ ತೆಗೆಯಿಸಿ ಬಿಟ್ಟರೆ, ಈ ಹಾಳ ಪಂತನಕಾರ ಯಾರಿಗೂ ಇಲ್ಲದಂತೆ ನಾ ನು ಉಪಾಯವನ್ನು ಹೇಳುತ್ತೇನೆ ಎಂದನು. ಪಡ್ಡೆಹುಡುಗ ರೆಲ್ಲಾ ಸೇರಿ ಇದಕ್ಕೆ ಒಪ್ಪಿ ಚೆಂಡಾಡುವ ನೆವದಲ್ಲಿ ಹೊಲಗಳಿ ಗೆ ಹೋಗಿ ತಕ್ಕ ಪ್ರಯತ್ನದಿಂದ ಬಸವನ ಕಾಲಿಗೆ ಹಾಕಿದ್ದ ಕೊರಡನ್ನು ಕಡಿದು, ಸರಪಣಿಯ ಕೊಂಡಿಯನ್ನು ಮುರಿದು ಬಿಟ್ಟರು. ಬಸವನ ಕಾಲಲ್ಲಿ ಸಂಕೋಲೆ ತಪ್ಪಿ ಹೋಯಿತು. ಇವನನ್ನು ಮುಂದಾಳಾಗಿ ಮಾಡಿಕೊಂಡರು. ಇವರೆಲ್ಲರೂ ಸೇರಿ ರಿ ಮಠವನ್ನು ಚೆನ್ನಾಗಿ ಸಾರಿಸಿ ಗುಡಿಸಿದರು. ರಂಗವಲ್ಲಿ ಯನ್ನು ಹಾಕಿದರು. ಸಂತೋಜಿಯು ಕೂತುಕೊಳ್ಳುವುದಕ್ಕೆ ವಿಕಾರವಾಗಿ ಚೌಕನಾಗಿರತಕ್ಕೆ ಒಂದು ಜಗಲಿ ಇತ್ತು. ಪಂತನು ತನ್ನ ನೆಶ್ಯದ ಸಿಂಬಳವನ್ನು ಒರೆಯಿಸಿ ಒರೆಯಿಸಿ ಪಕ್ಕದ ಗೋಡೆಯೆಲ್ಲಾ ಕರಗಾಗಿತ್ತು. ಪಂತನು ಕೂತುಕೊ