ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ಮಾಡಿದ್ದುಣೋ ಮಹಾರಾಯ, ಳುತಾ ಇದ್ದ, ಅವರ ಗೋಳೆಲ್ಲಾ ಅವನಿಗೆ ತಟ್ಟಿತು, ಎಂ ದು ಮಾತನಾಡಿಕೊಳ್ಳುತ್ತಾ ನಿಂತಿದ್ದರು. ಸದಾಶಿವ ದೀಕ್ಷಿತನು ಮಠದೊಳಕ್ಕೆ ಹೋಗಲು ಆ ಜನರೂ ಬಂದರು. ಅಲ್ಲಿ ನಡೆ ದಿದ್ದ ಪ್ರಮಾದವನ್ನು ಎಷ್ಟು ವಿವರಿಸೋಣ ! ನಾರಪ್ಪಯ್ಯನಿಗೆ ಕಂಣುಗುಡ್ಡೆ ಮೇಲಕ್ಕೆ ಸಿಕ್ಕಿ ಕೊಂಡು ಹೋಗಿತ್ತು, ಜ್ಞಾನವಿರ ಲಿಲ್ಲ. ಮೇಲೆಹಾಸಿದ್ದ ಈಚಾ ಚಾಪೆ ಸಹಿತವಾಗಿ ಸಂತನು ಸುಮಾರು ಸೊಂಟದುದ್ದ ಗೊಸಕೊಂಡು ಬಿದ್ದಿದ್ದನು. ಕತ್ತು, ಭುಜ, ಬೆನ್ನು, ಮಗ್ಗಲು, ಹಸ್ತ, ಸೃಷ್ಯಭಾಗ, ತೊಡೆ, ಮೊಳಕಾಲಕೆಳಗೆ ಮಾನಕಂಡ, ಇದೆಲ್ಲಾ ಕೆಳಗೆ ಬಿದ್ದಿತು. ಒಂದು ಕೊನೆಯಲ್ಲಿ ತಲೆ ಸ್ವಲ್ಪ ಎತ್ತಿಕೊಂಡಿತ್ತು. ಮತ್ತೊಂದು ಕೊನೆಯಲ್ಲಿ ಪಾದಗಳೆರಡೂ ಹಾದುಕೊಂಡು ನೆಟ್ಟಗೆನಿಂತಿತ್ತು, ಮುಖದಮೇಲೂ ಮೈ ಮೇಲೂ ಎಂಥಾ ಪುಡಿಬಿದ್ದು ಅ ದು ಅಲ್ಲಿಯೆಲ್ಲಾ ಚೆಲ್ಲಾಡಿತ್ತು. ಆ ಪುಡಿಯು ಇನ್ನೂ ಸ್ವಲ್ಪ ಸ್ವಲ್ಪವಾಗಿ ಮೇಲಿನಿಂದ ಉದುರುತ್ತಲೇ ಇತ್ತು. ಜಗಲಿಯ ಮೇಲೆ ಹಾಸಿದ್ದ ಈಚಚಾಪೆಯ ಅಂಚಿನ ಮಧ್ಯೆ ಒಂದುಕೊ ನೆಗೆ ಹೊಲಿಯುವ ದಾರವನ್ನು ಕಟ್ಟಿ ಅದರ ಇನ್ನೊಂದು ಕೊನೆಯನ್ನು ಒಂದು ಬಟ್ಟೆಗಂಟಿಗೆ ಸುತ್ತಿ ಆ ಗಂಟನ್ನು ಉ ನಾದ್ರಿಯ ತಲೆಯಮೇಲೆ ಸರಿಯಾಗಿ ಕಟ್ಟಿದ್ದರು. ಚಾಪೆ ದೊ ಸಕೊಂಡಕೂಡಲೆ ಸಂಣದಾರ ಕಿತ್ತುಹೋಯಿತು. ಮೇಲುಗಡೆ ಇದ್ದ ಚೀಲದ ಬಾಯಿ ತೆರೆದುಹೋಯಿತು. ಅದರಿಂದ ಸಂಣ ಹುಡಿ ಸುರಿದು ಚೆಲ್ಲಾಡಿತ್ತು, ಇನ್ನೂ ಸುರಿಯುತ್ತಲೂ ಇತ್ತು. ಸಮಾಜದಲ್ಲಿ ನೋಡುವಾಗ್ಗೆ ನಾರಪ್ಪಯ್ಯನ ಮೈಗೆ ಮುಳ್ಳು