ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೭ ನಿ | ಮಾಡಿದ್ದುಣೋ ಮಹಾರಾಯ, ಳ್ಳು ನಾಟಿಕೊಂಡಿತ್ತು. ಹೀಗೆಹಾಗೆ ಅಲಗುವುದಕ್ಕೂ ಆಸ್ಪದ ವಿರಲಿಲ್ಲ. ಆ ಮುಳ್ಳನ್ನು ಬಲವಂತವಾಗಿ ಕಿತ್ತರು. ಅದ ರಿಂದ ರಕ್ತದ ಪ್ರವಾಹವೇ ಹರಿಯುವುದಕ್ಕೆ ಮೊದಲಾಯಿತು. ಅದುವರೆಗೆ ಸಂತನನ್ನು ಎತ್ತಿ ಇಳಿಸಿ ಒರಗಿಸಿಕೊಂಡು ಹೀಗೆ ಲ್ಯಾ ಮಾಡಿದವರ ಮೈಕೈಗೆಲ್ಲಾ ಅವನ ಮೇಲೆ ಸುರಿದಿದ್ದ ಪು ಡಿಯು ಅಂಟಿಕೊಂಡು ಕಡಿತಕ್ಕೂ ಉರಿಗೂ ಮೊದಲಾಯಿತು. ಎಲ್ಲರೂ ಕೆರೆದು ಸಾಕಾಗಿ ಕೈಯೆಲ್ಲಾ ಕೆಂಪಗೆ ಗಂಟೆಯಾ ಯಿತು. ಬಟ್ಟೆಗಂಟಿನಲ್ಲಿ ಉವಾದ್ರಿಯ ಜಗಲಿ ಮೇಲುಗಡೆ ಕಟ್ಟಿದ್ದು ತರುವಾಯ ಅವ ದೊಸಗೊಂಡಾಗ ದಾರಕಿತ್ತು ಗಂ ಟುಬಿಚ್ಚಿ ಹೋಗಿ ಉದುರಿದ ಈ ಹುಡಿಯು ನಸಗುನ್ನಿಕಾಯಿ ಯ ಚೂರ್ಣವೆಂದು ಗೊತ್ತು ಮಾಡಿದರು. ಸಂತನ ಮೈ ಯಲ್ಲಿ ರಕ್ತಸುರಿಯುತಿರುವ ಗಾಯಕ್ಕೆ ಈ ಪುಡಿ ಸೋಕಿದೊಡನೆಯೇ ಗಾಯದಲ್ಲಿ ಕಡಿತಕ್ಕೆ ಮೊದಲಾಗಿ ಕೆರೆದರೆ ಮೈಯೆಲ್ಲಾ ಒಂ ದೇ ಹುಂಣಾಗುವ ಸಂಭವವಿತ್ತು. ಅದೆಲ್ಲವನ್ನೂ ಉವಾಯು ವಾಗಿ ಕೂಡಿದಮಟ್ಟಿಗೂ ತೆಗೆದರು. ಆದಾಗ್ಯೂ ಆ ಪುಡಿಯು ತನ್ನ ಕೆಲಸವನ್ನು ತಾನು ತೋರಿಸಿಯೇ ಬಿಟ್ಟಿತು. ತಂಣೀ ರನ್ನು ಹಾಕಿ ಎಲ್ಲವನ್ನೂ ತೊಳೆದರು. ಈ ಬಡ ಉವಾದಿ, ಯ ಹೆಂಡತಿ ಹೆರಿಗೆಗೆ ತೌರುಮನೆಗೆ ಹೋಗಿದ್ದಳು, ಇನ್ನು ಯಾರೂ ದಿಕ್ಕಿಲ್ಲದೆ ತಾನೇ ಅಡಿಗೆ ಮಾಡಿಕೊಳ್ಳುತಿದನು. ಹಬ್ಬ ಹರಿದಿನಗಳಲ್ಲಿ ಅವರಿವರಮನೆಗೆ ಔತನಕ್ಕೆ ಹೇಳುತಿದ್ದರು. ಇಂಥಾ ಅಸಂದರ್ಭಕಾಲದಲ್ಲಿ ಈ ವಿಪತ್ತು ಸಂಭವಿಸಿತು. ಸ ದಾಶಿವದೀಕ್ಷಿತನು ಹೆಚ್ಚಿನ ಮುರುಕದಿಂದ ದುಬಟಿಯ ಜೋಳನೆ