ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಮಾಡಿದ್ದುಣೋ ಮಹಾರಾಯ, ವಾಗಿ ಮಾತನಾಡಿಕೊಳ್ಳುತಿದ್ದರು. ಆ ಗುಂಡಿಯಿಂದ ಮುಳ್ಳು ಗಳನ್ನು ತೆಗೆಯುವುದು ಬಹಳ ಶ್ರಮವಾದ್ದರಿಂದ ಅದೆಲ್ಲಕ್ಕೂ ಅಲ್ಲಿಯೇ ಬೆಂಕಿ ಹಾಕಿ ಸುಟ್ಟು ಜಗಲಿಯ ಹಳ್ಳವನ್ನು ಮುಚ್ಚಿ ಬಿಟ್ಟರು. ಪಂತನು ಹಳ್ಳದೊಳಕ್ಕೆ ದೊರಕೊಂಡ ಕೂಡಲೆ ದಿಕ್ಕು ದಿಕ್ಕಿಗೂ ಓಡಿಹೋದ ಹುಡುಗರಲ್ಲಿ ಸೃಜನ ೨-೩ ದಿವಸ ನಾದರೂ ತಂತಮ್ಮ ಮನೆಗೆ ಬರಲೇ ಇಲ್ಲ. ಇನ್ನು ಸ್ವಲ್ಪ ಜನ ಆದಿನ ಸಾಯಂಕಾ: ವೊ ಮಾರನೇದಿನವೋ ಮನೆಗಳಿಗೆ ಬಂದರು. ಆಯಾ ಹುಡುಗರ ತಂದೆತಾಯಿಗಳ ಯೋಗ್ಯತೆ ಇದ್ದಂತೆ ಬಾಲಕರು ಮಾಡಿದ ರಾಕ್ಷಸಕೃತ್ಯದ ವಿಚಾರವಾಗಿ ಮಾತನಾಡಿಕೊಳ್ಳುತಿದ್ದರು. ಸದಾಶಿವದೀಕ್ಷಿತನು ಉವಾದ್ರಿಯನ್ನು ತನ್ನ ಮನೆಗೆ ತೆಗೆ ಯಿಸಿಕೊಂಡು ಹೋಗಿ ಅಲ್ಲಿ ಆತನಿಗೆ ಬೇಕಾದ ಉಪಚಾರ ಗಳನ್ನು ಮಾಡುತಾ ಗಾಯದೆಂಣೆ, ಅಂಟುನುಲಾಮು ಮೊದ ಲಾದ್ದನ್ನು ಹಾಕುತಾ, ಬೇಕಾದಾಗ ಕಾಡಿನೀರಿನಲ್ಲಿ ಹುಂಣು ಗಳನ್ನು ತೊಳೆಯುತಾ ಪುನಃ ಅದಕ್ಕೆ ಔಷಧಗಳನ್ನು ಹಾಕು ತಾ ಸಂತನಿಗೆ ಬೇಕಾದ ಪದ್ಯವನ್ನು ಮಾಡಿಸಿ ಉಪಚರಿಸುತಾ ಇದ್ದನು. ಮುನೇಜನರೆಲ್ಲರೂ ಸ್ವಲ್ಪವೂ ಅಸಹ್ಯ ಪಟ್ಟುಕೊಳ್ಳದೆ ಆತನನ್ನು ಉಪಚರಿಸಿದರು. ಎಷ್ಟು ಮಾಡಿದಾಗ್ಯೂ ಸಂತನಿಗೆ ಪೂರ್ತಿಯಾಗಿ ಗುಣವಾಗುವುದಕ್ಕೆ ನಾಲ್ಕು ತಿಂಗಳ ಮೇಲಾಯಿತು.