ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಮಾಡಿದ್ದುಣೋ ಮಹಾರಾಯ. ೫ ನೆ ( ಅ ಧ್ಯಾ ಯ. ಚಾಮರಾಜನಗರದಲ್ಲಿ ಉಪ್ಪಲಿಗರಿಗೂ ಪರಿವಾರದವರಿಗೂ ವಿಪರೀತವಾಗಿ ನಡೆದ ಕಲಹವನ್ನು ಕುರಿತು ಹಿಂದೆ ಸೂಚಿಸಿ ದೆಯಷ್ಟೆ. ಈ ಎರಡುಜಾತಿಯವರಿಗೂ ಇರುವ ಪರಸ್ಪರ ಷವು ಆಗತಾನೇ ಹುಟ್ಟಿದ್ದಲ್ಲ. ತಲಾಂತರದಿಂದ ನಡೆದು ಬರುವ ಈ ವೈಷಮ್ಯವು ಆಯಾ ಕುಲಕ್ಕೆ ಬಂದದ್ದು. ಚಾ ಮರಾಜನಗರದಲ್ಲಿ ಈ ಜಾತಿಯ ಜನಗಳು ನಡಿಸಿದ ಗಲಭೆಯ ಶಖೆಯು ಆವೂರಮಟ್ಟಿಗೇ ನಿಲ್ಲಲಿಲ್ಲ. ಸುತ್ತಮುತ್ತ ಇರುವ ಊರುಗಳಿಗೂ ಗ್ರಾನುಗಳಿಗೂ ವ್ಯಾಪನೆಯಾಗಿತ್ತು. ಸಂಜ ವಾಡಿಯಲ್ಲಿ ಉಪ್ಪಲಿಗರ ಒಕ್ಕಲು ಹೆಚ್ಚಾಗಿಯಾ ಪರಿವಾರದ ವರ ಮನೆ ಕಡಿಮೆಯಾಗಿಯೇ ಇತ್ತು. ಹೆಕ್ಕಾಗಲಿ ಕಡಿಮೆ ಯಾಗಲಿ, ಜಾತಿವೈರವೇನೋ ಏಕರೀತಿಯಾಗಿತ್ತು. ಆದರೆ ವಿಶೇಷ ಸಮಯಗಳಲ್ಲಿ ಈ ಜಾತಿಯವರಿಗೆ ಪರಸ್ಪರ ಇದ್ದ ಬೆಂಕಿಯ ಹೊಗೆ ಕಂಣಿಗೆ ಕಾಣಿಸುತಾಯಿತೇ ಹೊರತು ಉಳಿ ದಕಾಲಗಳಲ್ಲಿ ತೊರೆಯರೂ ಉಪ್ಪಲಿಗರೂ ಸಹಾ ಒಬ್ಬರಿಗೊ ಬ್ಬರು ಮಿತ್ರಭಾನದಲ್ಲಿಯೇ ಇರುತಾ ಇದ್ದರು. ಆ ಊರಿನಲ್ಲಿ ಉಪ್ಪಲಿಗರೇ ಆಗಲಿ ಪರಿವಾರದವರೇ ಆಗಲಿ ಸಮಯಾಂತರಗಳಲ್ಲಿ ಇವರ ಜೊತೆಗೆ ಸೇರಿಕೊಳ್ಳುತಿದ್ದ ಹೊ ಲೆಯರೇ ಆಗಲಿ ಸುಖಜೀವಿಗಳಾಗಿ ಇರುತಾ ಮನೆಗೆ ಎಷ್ಟು ಜನ ನಂಟರಿಷ್ಟರು ಬಂದಾಗ್ಯೂ ಅಕ್ಷ್ಯವಿಲ್ಲದೆ ಅವರಿಗೆ ಸತ್ಕಾರವನ್ನು ಮಾಡುತಾ ಐಶ್ವರ್ಯವಂತರ ಮನೆಯಲ್ಲಿ