ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೪ ಮಾಡಿದ್ದುಣೋ ಮಹಾರಾಯ, ಲ್ಲಿರುತಿರಲಿಲ್ಲ. ಆ ದಿವಸಗಳು ಬಂದರೆ ಇವರು ಮನೆಯನ್ನು ಬಿಟ್ಟು ಬೇರೆ ಬೇರೇ ಹೊರಟು ಹೋಗುತಿದ್ದರು. ಯಾನ ಊರಿಗೆ ಹೋಗುತ್ತಾರೆಂಬುವುದು ಇವರಿವರ ಮನೆ ಜನರಿಗೂ ಸಹಾ ತಿಳಿಯದು. ಇವರುಗಳ ಮನೆಗಳಲ್ಲಿ ವಿಚಾರಿಸಿದರೆ, CL ಈ ದಿವಸ ಬೆಳಿಗ್ಗೆ ಎಲ್ಲಿಯೋ ಹೋದರು, ಸಾಯಂಕಾಲ ದೊಳಗಾಗಿ ಬರುತ್ತಾರೆ !” ಎಂದು ಹೆಂಗಸರೂ ಹುಡುಗರೂ ಏಕರೀತಿಯಾಗಿ ಉತ್ತರ ಹೇಳುತಿದ್ದರು. ಈ ಜನರು ಈ ಬಗೆಯಾದ ಮೋಹಿಂ ಹೊರಡುವುದಕ್ಕೆ ಕೆಲವು ದಿವಸ ಮುಂಚೆ ಇನ್ನೊಂದು ಕೆಲಸವನ್ನು ಮಾಡು ತಿದ್ದರು. ಆ ಊರಿನಲ್ಲಿ ಒಬ್ಬ ಕೊರಮರವನು ಅನೂಚಾನ ವಾಗಿ ಅಲ್ಲಿನ ಗ್ರಾಮದೇವತೆ ಪೂಜೆಯನ್ನು ಮಾಡುತಾ ಆದೇ ವರಿಗಾಗಿ ಸರ್ಕಾರದವರು ಬಿಟ್ಟಿದ್ದ ಮಾನ್ಯದ ಭೂಮಿಯನ್ನು ಅನುಭವಿಸಿಕೊಂಡು ಅರ್ಚನೆಯನ್ನು ತಪ್ಪದೇ ನಡಿಸುತಿದ್ದನು. ಮೈಸೂರು ಸರಕಾರದ ದಂಡಿನವರು ಅದುವರಗೆ ವಿಶೇ ಷವಾಗಿ ಪರಾಕ್ರಮದಲ್ಲಿಯ ವಿಜಯಸಂಭ್ರಮದಲ್ಲಿಯೂ ಹೆಸ ರಗೊಂಡಿದ್ದರು. ಇ೦ಧಾ ದಂಡಿಗೆ ಬಕ್ಷಿ ರಾಮರಾಯರೂ ಇವರ ಅಂಣನನಗ ಬಕ್ಷಿ ಧೀಮರಾಯರೂ ಮುಖ್ಯ ಸೇನಾ ನಾಯಕರಾಗಿದ್ದರು. ಇವರ ಖ್ಯಾತಿಯು ಅನಂತಶಯನದಿಂದ ದಿಳ್ಳಿವರೆಗೂ ವ್ಯಾಪಿಸಿತ್ತು. ಈ ಸರದಾರರುಗಳಿಬ್ಬರೂ ತಮ್ಮ ಧಣಿಗಳಾದ ಮೈಸೂರು ರಾಜರಿಗಾಗಲಿ ಕುಂಪನಿ ಸರ್ಕಾರದ ವರಿಗಾಗಲಿ ಎರಡೆಣಿಸದೆ ಕೇವಲ ಭಕ್ತಿಯಿಂದಲೂ ನಂಬಿಕೆ ಯಿಂದಲೂ ನಡೆದುಕೊಳ್ಳುತಿದ್ದರು. ಇದರ ಪರಾಕ್ರಮದಿಂದ