ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಮಾಡಿದ್ದುಣೋ ಮಹಾರಾಯ, ಮೇಲ ಸಾಹಸದಿಂದ ಮೈಸೂರ ಸೀಮೆಯ ಸೇನೆಗೆ ಬಂದ ಹೆಸರುವಾಸಿಯು ಹಿಂದುಸ್ಥಾನದಲ್ಲಿಯೂ ಯೂರೋಪು ದೇಶ ಗಳಲ್ಲಿಯೂ ಚಿತ್ರಿತವಾಗಿದೆ. ಆ ಗಲಾಟೆಯಲ್ಲಿ ಕೊಲ್ಕಾಪುರದ ರಾಜ್ಯವನ್ನೂ ಇವರು ಹಿಡಿಯಬೇಕಾಗಿ ಬಂತಂತೆ. ಸೇನೆಯ ವರು ಆ ಊರನ್ನು ಕೊಳ್ಳೆಹೊಡೆಯಲು ಆರಂಭಿಸಿದರು, ಅಲ್ಲಿ ಮಹಾಲಕ್ಷ್ಮಿ ಗುಡಿ ಇದೆ. ಈ ದೇವರಿಗೆ ಅಕ್ಷಾಂತರ ಜನ ಭಕ್ತಾದಿಗಳಿದ್ದಾರೆ. ಇಲ್ಲಿ ವಿಶೇಷವಾಗಿ ಮಹತ್ತು ನಡೆ ಯುವುದೆಂದು ಪ್ರವಾದದೆ. ಶಾಸ್ತ್ರೀಯರಿಗೆ ಇದು ಒಂದು ದಿವ್ಯಸ್ಥಳ, ವೀರಾವೇಶದಿಂದ ದುರಾಶೆಯಿಂದಲೂ ಮನ ಸ್ಟುಬಂದಹಾಗೆ ಹಾವಳಿ ಮಾಡುವ ಸೇನೆಯವರು ಈ ಊರ ನೆಲ್ಲಾ ಮಾಡುತ್ತಿರುವಾಗ ಇವರಿಗೆ ಉಚ್ಚವೂ ಇಲ್ಲ ನೀಚವೂ ಇಲ್ಲ. ಬಹುದಿವಸದಿಂದ ಪ್ರಸಿದ್ದವಾದ ಈ ಗುಡಿಗೆ ಅನೇಕ ರಾಜರು ಬೇಕಾದ ಐಶ ರವನ್ನು ಕೊಟ್ಟಿದಾರೆ, ಅ ನೇಕಜನ ಭಕ್ತಾದಿಗಳು ಬೇಕಾದ್ದನ್ನು ಹರಕೆಯಾಗಿಯೂ ಮುಡುಪಾಗಿಯೂ ತಂದು ಒಪ್ಪಿಸಿದ್ದಾರೆ. ಅದೆಲ್ಲಾ ಗುಡಿ ಯಲ್ಲಿ ಸೇರಿದೆ. ಇಂಧಾದ ನ್ನು ಎಣ್ಮರೆ ? ಈ ಗುಡಿಯತಂಟೆಗೆ ಹೋಗದೆ ದೇವರಿಗೆ ನಮಸ್ಕಾರವನ್ನು ಮಾಡಿ ಹೊರಟುಹೋ ಗುವುದಕ್ಕೆ ದಂಡಿನವರು ಅಂಧಾ ಪುಣ್ಯವನ್ನು ಮಾಡಿರುವು ದೇನು ? ಇಂಧಾ ಸಮಯ ದೊರೆತಿರುವಾಗ್ಗೆ ಬಿಡುವುದಕ್ಕೆ ಹೇಗೆ ಆಗುತ್ತೆ ? ದಂಡಿನವರು ಗುಡಿಯೊಳಕ್ಕೆ ನುಗ್ಗಿಯೇ ನುಗ್ಗಿ ದರು. ಅಲ್ಲಿ ಸಿಕ್ಕಿದ್ದನ್ನೆಲ್ಲಾ ತೆಗೆದುಕೊಂಡು ಹೋಗು ವಾಗ್ಗೆ ಗರ್ಭಗ್ರಹದಲ್ಲಿ ಅಮ್ಮನವರ ಮೂಗಿಗೆ ಹಾಕಿದ್ದ ಗಿ