ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಮಾಡಿದ್ದುಣ್ಣೆ ಮಹಾರಾಯ, ಮೂಗುತಿಯ ಗಾತ್ರವಾದ ಮುತ್ತನ್ನು ತೆಗೆದುಕೊಂಡು ಹೋ ದರಂತೆ. ಆಗ ಅಮ್ಮ ನವರಿಗೆ ಆಗ್ರಹ ಬಂದು ಈ ಮುತ್ತು ಯಾವಯಾವ ದೇಶಕ್ಕೆ ಹೋಗುತ್ತೆಯೋ ಅಲೈಲ್ಯಾ ವಾಂತಿ ಭೇದಿ ರೋಗ ಆಗ ಹುಟ್ಟಿ ಹರಡಿಕೊಂಡು ಜನರನ್ನು ಕೊ ಇಣು ಮೊದಲುಮಾಡಿತಂತೆ, ಸಾಧಾರಣ ಜನರೆಲ್ಲಾ ಹೀಗೆ ನಂಬಿಕೊಂಡರು. ಅದಕ್ಕೆ ಮುಂಚೆ ಅನೇಕ ವರುಷಗಳ ಹಿಂದೆ ಹುಟ್ಟಿದ ವಾಗ್ಭಟ ಅಧವಾ ಬಾಹಟವೆಂಬ ವೈದ್ಯಗ್ರಂಥ ಗಳಲ್ಲಿ ವಿಷಯ ಚಾಡ್ಯವೆನಿಸಿಕೊಂಡಿರುವ ಈ ರೋಗಕ್ಕೆ ಚಿಕಿತ್ಸೆಯನ್ನು ಹೇಳಿದಾರೆ. ಇದೇ ಮೊದಲಾದ ಕಾರಣಗ ಳಿಂದ ವಾಂತಿಭೇದಿಜಾಡ್ಯವು ಮೈಸೂರ ಸೇನೆಯವರು ಕೊ ಲಾಪುರದನ್ನು ನ ಮೂಗುತಿಯ ಮುತ್ತನ್ನು ತಂದಾಗಿನಿಂದ ಹುಟ್ಟಿತೆಂದು ಹೇಳುವುದು ಹೇಗೆ ? ಏವಂಚ ಈ ವಿಷಚಿಯು ಆಗಿನಿಂದ ಈಚೆಗೆ ವಿಶೇಷವಾಗಿ ಹರಡಿಕೊಂಡನೋ ನಿಜ. ಅದು ಮೊದಲುಗೊಂಡು ಈ ಸಂಜನಾಡಿಗೆ ಅನೇಕವೇಳೆ ವರುಷಕ್ಕೆ ಎರಡುಸಾರಿ ವರುಷಕ್ಕೆ ಒಂದುಸಾರಿ ಈ ರೋಗ ಬಂದು ಮನೆಮನೆಗೂ ತನ್ನ ಕೆಲಸವನ್ನು ಮಾಡಿಕೊಂಡು ಹೋಗುತಿತ್ತು. ಆಗ ಊರಜನರೆಲ್ಯಾ ಹೆಚ್ಚಾಗಿ ಹೆದರಿಕೊಂ ಡು ಇದು ಮಾರೀ ಉಪದ್ರವೆಂಬದಾಗಿ ಎಲ್ಲರೂ ಆವೂರ ದೇವತೆಗೆ ಅತ್ಯಂತ ಭಯಭಕ್ತಿಯಿಂದ ನಡೆದುಕೊಳ್ಳುತಿದ್ದರು, ಆ ದೇವರಿಗೆ ಕೊಲ್ಲಾಪುರದ ಮಹಾಲಕ್ಷ್ಮಿ ಎಂದು ಹೆಸರಾಯಿ ತು, ಇವರ ಭಕ್ತಿ ಹೆಚ್ಚಿದಹಾಗೆಲ್ಲಾ ದೇವರಲ್ಲಿ ಮಹತ್ತು ಹೆಚ್ಚು ತಾ ಬಂತು. ಈ ದೇವರಿಗೆ ಖಾಸಗಂಟು, ಕಪ್ಪದ