ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ಲೆ ಮಾಡಿದ್ದುಣೋ ಮಹಾರಾಯ, ಯುತಿದ್ದುದು ಹಗಲು ರಾತ್ರಿ ಎರಡುಹೊತ್ತೂ ಆರಾಧನೆ ಜರುಗುತಾ ಬಂತು. ದಿನಚರಿ ಒಂದೊಂದು ಅಲಂಕಾರ ಮಾ ಡುವುದು, ಶುಕ್ರವಾರ ಮಂಗಳವಾರ ಹೆಚ್ಚಾದ ವಿಭವವನ್ನೂ ದೀಪಾರಾಧನೆಯನ್ನೂ ಮಾಡುವುದು, ಕಾಣಿಕೆ ಮೊಲಾದ ಹಣ ದಲ್ಲಿ ಲೋಕವಿಡಂಬನಾರ್ಧವಾಗಿ ಬೇಕಾದ ವೆಚ್ಚವನ್ನು ಮಾಡಿ ಜನರನ್ನು ಮೆಚ್ಚಿಸುವುದು, ಆಗಾಗ್ಗೆ ದೇವರ ನಿವೇದನಕ್ಕಾಗಿ ಬೇಕಾದ ದಣಿವಾರವನ್ನು ಜೋಯಿಸರ ಮನೆಯವರಿಂದ ಮಾ ಡಿಸಿ ಅಮ್ಮನವರ ಪ್ರಸಾದವೆಂದು ಆ ಊರಲ್ಲಿ ಮನೆಮನೆಗೂ ಗ್ರಹಪ್ರಾಪ್ತಿಯಾಗಿ ಕಳುಹಿಸುವುದು, ಹೀಗೆ ಜರುಗಿಸಲು ಸಿ ದ್ದನು ಆರಂಭಿಸಿದನು, ಇಷ್ಟೆ ಅಲ್ಲ, ಈ ಹೊಸ ಪೂಜಾರಿಯು ದಿನಕ್ರಮೇಣ ಕೌರವನ್ನು ಮಾಡಿಸಿಕೊಳ್ಳದೆ ದೀಕ್ಷೆ ಬಿಟ್ಟನು. ಹಣೆಗೆ ಕುಂಕುಮವನ್ನು ಇಟ್ಟುಕೊಂಡು ಬೆಳ್ಳಿಕಟ್ಟುಗಳನ್ನು ಹಾಕಿದ ಒಂದು ಕರೀ ಬೆತ್ತವನ್ನು ಹಿಡಿದು ದಿನವಹಿ ಸ್ನಾನವನ್ನು ಮಾಡುತಾ ಮಡಿಒ ಟೈಯನ್ನು ಉಡುತಾ ದೇವರ ಪೂಜೆ ಯನ್ನು ಬಹಳ ಭಕ್ತಿಯಿಂದ ಮಾಡುತಾ ಶುಕ್ರವಾರ ಮಂಗ ಳವಾರ ರಾತ್ರೆ ಮಂಗಳಾರತಿಯಾದ ಮೇಲೆ ಮುಖಕ್ಕೆ ಲ್ಯಾ ಕುಂಕುಮವನ್ನು ಬಳಿದುಕೊಂಡು ಕೆಂಪು ದಾಸವಾಳದ ಹು ಮೀನ ದಂಡೆಯನ್ನು ಹಾಕಿಕೊಂಡು ಕೈ ಮುಗಿದುಕೊಂಡು ದೇವರ ಮುಂದೆ ಯಾವ ಮಾತೂ ಆಡದೆ ಕಂಣಮುಚ್ಚಿಕೊಂಡು ಸುಮ್ಮನೆ ಕೂತುಕೊಳ್ಳುತ್ತಾ ಬಂದನು. ಹಾಗೆಯೇ ಒಂದೊಂ ದುಸಾರಿ ತಟ್ಟನೆ ಎದ್ದು ನಿಂತುಕೊಂಡು ಒಂದು ಹಿಡಿ ಕುಂಕು