ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦

ಮಾಡಿದ್ದುಣೋ ಮಹಾರಾಯ, ಆರಂಭವಾಯಿತು. ಪಿಶಾಚ ಹಿಡಿದವರು, ಬ್ರಹ್ಮ ರಾಕ್ಷಸ ಹಿಡಿ ದವರು, ಮೋಹಿನಿಗ್ರಸ್ಮರು, ಇತರವಿಧವಾದ ಪ್ರಾರಬ್ಧಕರ್ಮ ಪೀಡಿತರು, ಇವರು ಒಂದು ಕಡೆಯಲ್ಲಿಯೂ; ದೀರ್ಘರೋಗಿಗಳು ಕುಷ್ಠರೋಗಿಗಳು ಕುರುಡರು ಕಿವಡರು ಇವರು ಒಂದು ಕಡೆಯಲ್ಲಿಯೂ; ಹೆಂಣು ಕೊಟ್ಟು ತೆಗೆದುಕೊಳ್ಳಲು ಉದ್ದು ಕ್ಯರಾದವರು, ಸರಕಾರದಲ್ಲಿ ನಡೆಯುತಾ ಇರುವ ಕಕ್ಷಿಗಳು ಒಂದುಕಡೆಯಲ್ಲಿಯೂ, ಇವರೇ ಮೊದಲಾಗಿ ಅನೇಕರು ಸಂಜ ನಾಡಿಗೆ ವಾರಿ ನಡೆಯುತ್ತಾ ಬಂದರು. ಗುಡಿಯ ಆವರ್ಣವು ಇನ್ನೂ ದೊಡ್ಡದಾಗಿ ಕಟ್ಟಲ್ಪಟ್ಟಿತು. ಅನ್ಯಾಯವರ ಹ ಜಾರವೆಂದು ಒಂದು ದೊಡ್ಡ ಹಜಾರವೂ ಆಯಿತು. ಅದ ರಲ್ಲಿ ಅಪ್ಪಾಜಿಯವರ ಗದಿ ಗೆಯೂ ಒಂದು ನಿರ್ಮಾಣವಾ ಯಿತು. ಅಪ್ಪನವರ ಪ್ರಭಾವ ಹೀಗಿರಲಿಕ್ಕಾಗಿ, ಸಂಜನಾಡಿಯ ಮಹಾಜನರು ಆಗಾಗ್ಗೆ ವಿಜಯಯಾತ್ರೆಗಾಗಿ ಹೊರಡುತಾ ಇದ್ದರಷ್ಟೆ. ಹಾಗೆ ಪ್ರಯಾಣ ಮಾಡುವುದಕ್ಕೆ ಮುಂಚಿತವಾಗಿ ಅಪ್ಪಾಜಿಯವರಲ್ಲಿ ಕಣೀಕೇಳಿ ಅವರಲ್ಲಿ ಸೈ ಎನ್ನಿಸಿಕೊಂಡು ಕೊಲ್ಲಾಪುರದ ಅಮ್ಮನವರಿಗೆ ಬೇಕಾದ ಸೇವೆಯನ್ನು ಮಾಡಿ ಹರಕೆ ಹೊತ್ತು ಅಪ್ಪಾಜಿಯ ಅಪ್ಪಣೆಯನ್ನು ಪಡೆದು ಹೊರ ಡುತಿದ್ದರು. ಈ ಜನರು ಸಾಧಾರಣವಾಗಿ ದಕ್ಷಿಣದೇಶಕ್ಕೆ ಹೋಗುತಿದ್ದರು. ಆದರೆ ಇವರ ದಾರಿಯು ಎಲ್ಲರೂ ತಿರಗ ತಕ್ಕ ತೊನ್ನೂರು ಕಣಿವೆ ಗೆಜ್ಜಲಹಟ್ಟ ಕಣಿವೆ ಇವುಗಳಲ್ಲ. ಇವರು ಯಾವಾಗಲೂ ಜನಸಂಚಾರವಿಲ್ಲದ ಕಾಡುದಾರಿಯಲ್ಲಿ