ಪುಟ:ಮಾತೃನಂದಿನಿ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ನಿದ್ರಾಜಡತಯಲ್ಲಿರುವ ನಮ್ಮ ಭಗಿನಿಯರಿಗೆ) ರಾಗಂ (ಯಾರು ಹಿತವರು ಮನವೆ) ಏಳೇಳಿರೆನ್ನೊ ಅದಕ್ಕತಂಗಿಯರೇll ಏಳೇಳು ಬಗೆಯಾಗಿ ಹೇಳುವೆನು ಕೂಗಿ ಅ || ಹೆತ್ತಾಕೆಯಳುತಿರಲ್ ತಲೆಯೆತ್ತಿ ನೋಡದಿರೆ ಮತ್ತಾವುದಿ ಹುದೆಮಗೆ ಕರ್ತವ್ಯವಿಳೆಯೊಳ್ || ಕತ್ತಲೆಯ ಕೋಣೆಯೊಳು ಮತ್ತಿನಿಂ ಮಲಗಿಹುದು | ಮತ್ತ ಕಾಶಿನಿಯರಿಗಿದೆತ್ತಣದು ನಡತೆ || ೧ || ಊರೂರ ತಿರುತಿರುಗಲರಸರನು ಕಳುಹಿದಿರಿ | ಆರದೊಂದಿನಿತು ಮೈಮರೆದು ಮಲಗಿದಿರಿ || ಸಂಗೊಳುವರಕಟ ಪರದೇಶಿಗಳು ಬಂದು | ಅಮ್ಮನಿದಿರಿ ಸವ ಧೀರರಿಲ್ಲಿಹರೆಂದು ಕೇಳಿ| ೨ || ಜೋಗಿಮಲಗುವರೆ ನಿದ್ರಾಸೊಗ ನೀವಳೆದಿಂತು | ಬೇಗಪಡುತಿರೆ 'ಕರ್ನಾಟವತೆಯಂತು | ಕೂಗುತಿದೆ ಗನಿಕರವಾಗುತಿದೆ ಶುಭಶಕುನವಾಗಗೊಚರನೊಲಿವ ಬೀರಮಂ ನೆನೆನೆನೆದು || ಏಳೇಳಿ || ೩ || ಕರೆಯಿಸಿರಿ ನಿಮ್ಮರಸನು, ನೆರೆಯಿಸಿ ಕಾರ್ಯವನ್ನು ಹುರಿಗೊಳಿಸಿ ನಿಲ್ಲಿಸಿರಿ ದೇಶಸೇವಕರಂ || ಪರಿಭಾವಿಸಿ ನಮ್ಮ ಪೂರ್ವಜರ ಮಹಿಮೆಯನು, ಪರದೇಶಿಗಳ ಸಿಂದಕ್ಕೆ ಪಡೆಯಿರಿ ಕೀರ್ತಿ ಯನು || ಏಳೇ || ೪ || ನೀವಲ್ಲದಿನ್ನಾರು ಈವೇಳೆಯೊಳು ಕಾಯ್ದ | ರೇವೇಳೆ ಕರ್ಣಾಟಮಾತೃಭಂಡಾರ | ನಾವಿಧದಿ ಬರಿದಾಗುತಿಹುದು ವಿದೇಶಿಗಳಿಂದ | ಸಾವಧಾನದಿ ನೋಡಿ ಭಾವೆಯರೆ ನೀವೇಳಿ || ಏಳೇಳಿ |೫|| ಕಳೆಯದಿರಿ ಕಾಲವನು, ಕೆಳೆತನದಿ ಲೋಕವನು ಬೆಳಯಿಸಿರಿ ಸಂಪದವನ್ನು ಕೆಲಸತೆಯನುಳಿದಿನ್ನು || ಒಲಿದಕ್ಕಗಳಿಗೆ ಹೇಳಿ, ಎಳದಂಗಿಯರೆ ಕೇಳಿ ತಳುವು ಮಾಡದೆಳಿ ನಲವಿನಿಂ ನೆರೆಬಾಳಿ ಏಳೇಳಿ || ೬ || ಉದಯಾದ್ರಿ ಶಿಖರದೊಳು ಉದಯಿಸಿದನಿ ಭಾನು | ಸದಮಲಾತ್ಮರ ನೋಡಿ ನಗುತ ಲಿಹನು || ಮದವಳಿದು ಮುದವಡೆದು ನಡೆನೋಡಿ ಮು೦ದಿಹುದನ್ನು || ಸದುಳದಿಂ ಪೇಳುವೆನು ಸುದತಿಯರೆ ನಿಮಗಿನ್ನು ೧ ಏಳೇಳಿ | ೭ || ಕನ್ನಡದಮಾತಾ ಮುನ್ನಿದ್ದ ವೈಭವವ ನಿನ್ನೊಮ್ಮೆ ನೆಲೆಗೊಳಿಸೆವೆಂದಿರ್ಪ ನಮ್ಮ || ಕನ್ನಡದ ನಾಡೊಡೆಯ ಚೆನ್ನ ಕೃಷ್ಣಂದ್ರಂಗೆ ನನ್ನಿಯಿಂ ಜಯ ಎಂದು ಹರಸಿಂದು || ೮ || ಜಯವೆನ್ನಿ ಕರ್ಣಾಟ ಜನನಿಯರಿದಾವರೆಗೆ | ಜಯವೆನ್ನಿ ಕರ್ಣಾಟ ಭಾರತಿಯ ನುಡಿಗೆ |ಜಯವೆನ್ನಿ ನರಶೇಷ ಗಿರಿವರನ ಚರಣಕ್ಕೆ ! ಜಯವೆನ್ನಿ ಸಂತತವು ಕರ್ಣಾಟ ಜನಪದಕೆ || ಏಳೇಳಿ || ೯ ||