ಪುಟ:ಮಾತೃನಂದಿನಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿವೇದನ. use ನನ್ನ ಪರಮಪೂಜ್ಯರಾದ ದೇಶೀಯಭಗಿನಿಯರೇ' ನಾನೋರ್ವ ಬಾಲಿಶ ವಿದ್ಯಾರ್ಥಿನಿ; ಅರ್ಯಭೂಮಾತೆಯ ಅನಂತ ಸಂತಾನದಲ್ಲಿ ನಾನೊಂದು ಅಣುಮಾತ್ರ. ಬಹುಭಾಷಾಪರಿಶ್ರಮವಾಗಲೀ, ಪ್ರೌಢಶಿಕ್ಷಣದ ಪಾಂಡಿತ್ಯವಾಗಲೀ, ನಾಗರಿಕತೆಯ ಗಂಧವಾಗಲಿ, ರಸಿಕ ಸಮಾಜ ಸುಧಾರಣೆಯ ಮುಖ್ಯ ತತ್ತ್ವವಾಗಲೀ, ಮತಖಂಡನ ವರ್ಣಸಂಕರ ಗಳ ಪರವಾಗಿ ವ್ಯಾಖ್ಯಾನಮಾಡುವಷ್ಟರ ಶಾಸ್ತ್ರಜ್ಞಾನವಾಗಲೀ, ಭಿನ್ನ ಭಿನ್ನ ಮತಗಳ ಏಕೀಕರಣ ಸಾಮರ್ಥ್ಯವಾಗಲೀ, ಯಾವದೇ ಒಂದನ್ನೂ ತಿಳಿದವ ಇಲ್ಲದ ಸಾಮಾನ್ಯ ಸ್ತ್ರೀ, ಇಂತಿರುವ ನನ್ನಿಂದ ಈ ಲೇಖನ ಕಾರ್ಯವು ಹೇಗೆ ನಿರ್ವಹಿಸಲ್ಪಡಬೇಕೆಂಬ ಭಾವನೆಯು ವಿಚಾರಪರರ ತರ್ಕಕ್ಕೆ ಒಳಪಟ್ಟೆ ಇರಬೇಕಷ್ಟೆ; ಸಹಜ ! ಅರಿವಿಲ್ಲದ ನನ್ನಿ೦ದ, ಕೇವಲ ನನ್ನ ಸ್ವಶಕ್ತಿ-ಸ್ವ ಚಾತುರ್ಯಗಳಿಂದ, ಗುರುತರದ ಸಮಾಜಪರವಾದ ಹಲವು ವಿಷಯ ವಿಚಾರಗಳನ್ನು ಪ್ರತಿಪಾದಿ ಸುವ ಈ ಗ್ರಂಥವು ರಚಿಸಲ್ಪಟ್ಟಿತೆಂದು ಹೇಳಿಕೊಳ್ಳಲಾರೆನು. ಎಂದರೆ, ಇದು ಅನ್ಯಭಾಷಾಗ್ರಂಥಗಳ ಭಾಷಾಂತರೀಕರಣವೆಂದು ಮಾತ್ರ ತಿಳಿಯ ಬಾರದು, ಏಕೆಂದರೆ, ದೇಶಭಾಷೆಯೊಂದರಲ್ಲಿಯೇ ದೃಷ್ಟಿಯಿಟ್ಟು, ಅನ್ಯ ಭಾಷಾ ಪರಿಶ್ರಮಕ್ಕವಕಾಶವನ್ನೇ ಕಂಡವಳಲ್ಲದ ನಾನು, ಭಾಷಾಂತರಿಸುವುದು ಇಲ್ಲವೇ ಅವುಗಳಲ್ಲಿಯ ವಿಷಯಗಳನ್ನು ಸಂಗ್ರಹಿಸುವುದು ಹೇಗೆ? ಇಷ್ಟು ಮಾತ್ರ ಹೇಳಬಲ್ಲೆನು. ಗಂಫಾವತರಣದ ಪ್ರೇರಣೆಗೂ, ಪ್ರತಿಭೆಗೂ, ಕಲ್ಪನೆಗೂ, ಮತ್ತು ಮೇಧಾಶಕ್ತಿಗೂ, ಆ ನಮ್ಮ ಮಾತೃರೈವವೇ ಕಾರಣ-ಕಾರ್ಯಕರ್ತ್ರಿಯಾಗಿ ರುವಳೆಂದೂ, ಆ ನಮ್ಮ ತಾಯಿ, ಯಾವರೀತಿಯಲ್ಲಿ, ಯಾವರೂಪದಲ್ಲಿ, ಯಾವದಾರಿಯಲ್ಲಿ, ಮತ್ತು ಎಂತಹ ವಾಕ್ಸರಣಿಯಲ್ಲಿ, ಯಾವಯಾವಕಾಲ ದಲ್ಲಿ ಹೇಗೆಹೇಗೆ ಪ್ರೇರೇಪಿಸಿದಳೊ ಹಾಗೆಯೇ, ಅವಳ ಪ್ರೇರಣೆಯಾದಂ ತದೆ, ಅವಳ ಕೃಪಾವಲೋಕನವೊಂದನ್ನು ಮುಖ್ಯಾವಲಂಬವಾಗಿಟ್ಟು, ಅವಳೆಂದಳೆದೊಯ್ಯಲ್ಪಟ್ಟ ದಾರಿಯಲ್ಲಿ ನಾವುದೇ ಮುಖ್ಯ ಕರ್ತವ್ಯವೆಂದೂ ನಂಬಿರುವ ಮೇಲಿನ ಜಡಭಕ್ಕಿದೆ. ಇದರಿಂದಲೇ ಈ ಗ್ರಂಥವು ವಿಲಿಣಿತ ವಾಗಿರುವುದು,