ಪುಟ:ಮಾತೃನಂದಿನಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆದುದರಿಂದ ನನ್ನ ಪ್ರಿಯ ಸೋದರಿಯರೇ! ಭಗವತಿಯಿಂದ ಪ್ರೇರಿತ ವಾಗಿ ಜನ್ಮವನ್ನೆತ್ತಿರುವ ಈ ನಂದಿನಿಯಲ್ಲಿ ಭೂತ-ಭವಿಷ್ಯದ್ವರ್ತಮಾನ ಕಾಲಗಳ ವಸ್ತು-ಸ್ಥಿತಿ-ಸ್ವರೂಪ-ಪರಿವರ್ತನಾ ಕ್ರಮಗಳನ್ನು ತಕ್ಕಮಟ್ಟಿಗೆಉದಾಹರಣೆಗಳನ್ನು ಮುಂದಿಟ್ಟು-ಸಹಜ ರೀತಿಯಿಂದ ಪ್ರತಿಪಾದಿಸುತ್ತಿರುವ ಪ್ರತಿಯೊಂದು ಪರಿಚ್ಛೇದವನ್ನೂ ಚನ್ನಾಗಿ ಮಥಿಸಿ, ನಾವಧಾನದಿಂದ ಸಮಾಲೋಚಿಸಿ, ಗುಣಗ್ರಹಣಮಾಡಿ, ದೀನಭಗಿನಿಯರಿಗೆ ಆಶ್ರಯವನ್ನು ಕಲ್ಪಿಸುವುದರಿಂದ, ನಮ್ಮ ಚಿತ್ರಕಲಾ ನರೇಶರೇ ಮೊದಲಾದವರ ಆದರ್ಶ ಜೀವನವನ್ನು ಸಾರ್ಥಕಪಡಿಸಿ, ನಮ್ಮವರನ್ನು ಸುತ್ತಮುತ್ತಿ ಕಾಡುತ್ತಿರುವ ಕ್ಷೇಶ-ಸಂಶಯಗಳನ್ನು ಕಡಿದುಹಾಕಿ, ನಮ್ಮಿಪ್ರಪಂಚದಲ್ಲಿ ನಾರಾನಾರ ವಿಚಾರಪರತೆ, ಇತಿಕರ್ತವ್ಯತೆ, ಆತ್ಮಾವಲಂಬನದ ಅಮೋಘಶಕ್ತಿಗಳನ್ನು ಸರ್ತಿಗೊಳಿಸುವಂತಹ ವಿದ್ಯಾವೈಭವವು ತಲೆದೋರಿ, ಜ್ಞಾನಸೂರ್ಯೋ ದಯದಿಂದ ನಮ್ಮ ಪೂರ್ವಜರ ಪ್ರಾಶಸ್ತ್ರವು ಮತ್ತೆ ಕಳೆಯೇರಿ ಬೆಳಗುವಂತೆ ವಾಡಿ, ನಮ್ಮ ನಿರ್ಮತ್ಸರ ಪ್ರೇಮ ಸಂಭಾವನೆಯಿಂದ ನಮ್ಮ ದೇಶಮಾತೆಯು ಆನಂದಮಯಿಯೆನ್ನಿಸುವಂತೆ ಮಾಡಲು, ಸರ್ವಪ್ರಕಾರದಿಂದಲೂ ಪ್ರಯತ್ನ ವನ್ನು ಕೈಕೊಳ್ಳುವುದು, ಕೋಮಲಾಂತಃಕರಣೆಯ ರಾದ ನಿಮ್ಮನ್ನೆ ಸೇರಿ ರುವುದು, ಮತ್ತೇನನ್ನು ಹೇಳಲಿ? ನನ್ನ ಭಗಿನಿಯರೇ! (ತಾಯಿಗಿಂತ ಹಿತರಿಲ್ಲ; ಉಪ್ಪಿಗಿಂತ ಸವಿಯಿಲ್ಲ.' ಎಂಬ ಗಾದೆಯನ್ನು ನೀವೆಲ್ಲರೂ ತಿಳಿದೇ ಇರುವಿರಿ, ತಾಯಿಯೆಂದರೆ, ನಮ್ಮ ಮೈಯ್ಯಬ್ಬುವುದೂ, ತವರ್ಮನೆಯನ್ನು ನೆನೆದಮಾತ್ರಕ್ಕೆ ಆತ್ಮನು ಆನಂದ ದಿಂದ ನಲವೇರಿ ನಲಿದಾಡುವುದೂ ನಿಜವಷ್ಟೆ ! ಅದೇತರಿಂದ? ಆ ತಾಯಿಯ ಅನಂತವಾದ-ಅಕ್ಷಯವಾದ-ಪ್ರೀತಿಯು ನಮ್ಮನ್ನು ಅನುದಿನವೂ ಸುತ್ತು ವರಿದು ಸಲಹುತ್ತಿರುವುದರಿಂದಲೇ ಅಲ್ಲವೇ? ಹಾಗಾದರೆ, ಅಂತಹ ಪ್ರೇಮ ಮಯಿಯಾದ ತಾಯಿಯಲ್ಲಿ ನಾವು ಹೇಗೆ ವರ್ತಿಸಬೇಕು ? ಹೇಳಲಾದೀತೇ? ತಾಯಿಯ ಮನಸ್ಸು ಒಲಿಯಬೇಕಾದರೆ, ಅವಳಲ್ಲಿರುವ ಅತ್ಯದ್ಭುತ ವಾದ ಕ್ಷಮಾ, ಧೃತಿ, ಶಾಂತಿ, ಔದಾರ್ಯಗಳ ಸತ್ಯವನ್ನು ನಾವೂ ಅನುಕರಣ ಮಾಡಿ, ಅದರಿಂದ ನಮ್ಮ ಎಡಬಲದವರನ್ನೂ ಮೇಲಕ್ಕೇರಿಸು ವುದು ಅವಶ್ಯಕವಲ್ಲವೆ? ಇಲ್ಲಿ ನಮ್ಮ ತಾಯಿಯೆಂದರೆ, ನಮ್ಮ ಗರ್ಭ ಧಾರಿಣಿಯರು ಮಾತ್ರವೇ ಅಲ್ಲ. ಅವರನ್ನೂ ಹತ್ತು-ಹೊತ್ತು ಸಲಹುತ್ತಿರುವ ನಮ್ಮ ಆರ್ಯಭೂಮಾತೆ