ಪುಟ:ಮಾತೃನಂದಿನಿ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯೇ ನಮ್ಮೆಲ್ಲರಿಗೂ ತಾಯಿ; ಅವಳೇ ಸಮಸ್ತ ದೇವತಾಸಮೂಹಕ್ಕೂ ಅಧಿ ದೇವತೆ; ಇದೇ ನನ್ನ ತಿಳಿವಳಿಕೆ ! ಅ ನಮ್ಮ ಭಗವತಿಯ ಪ್ರತಿನಿಧಿಸ್ವರೂಪಿಣಿ ಯಾದ ನನ್ನ ಜನ್ಮದಾತೆಯು ತನ್ನ ಸ್ಕೂಲದೇಹವನ್ನು ಳಿದಿದ್ದರೂ, ಯಶಶ್ಯ ರೀರದಿಂದ ನನ್ನ ಪ್ರತಿಯೊಂದು ಅವಯವಗಳಲ್ಲಿ ವ್ಯಾಪಿಸಿ, ನನ್ನನ್ನು ಈ ಬಗೆಯಾಗಿ ಪಿಡಿದಾಡಿಸುತ್ತಿರುವಳೆಂದೂ, ಅವಳ ಆಶೀರ್ವಾದ ಬಲದಿಂದ ನನ್ನ ಸ್ವಾಮಿಯು ನನ್ನಲ್ಲಿ ಸಾಕ್ಷಾತ್ಕರಿಸಿ, ಮಾತೃಪ್ರೇರಣೆಯಿಂದ ನನ್ನ ಸಮಸ್ತ ಕಾರ್ಯಕಲಾಪಗಳಿಗೂ ಸಹಾಯಕನಾಗಿ ನಿಲ್ಲುತ್ತಿರುವನೆಂದೂ, ಮತ್ತು ಆ ತಾಯಿಯ ಕಟಾಕ್ಷದಿಂದಲೇ ಗುರುಹಿರಿಯರ ಹರಕೆಗಳೂ. ಇದ್ರರ್ಮ ಭ್ರಾತೃವರ್ಗಿಯರ ಸಹಾಯವೂ ಮತ್ತಷ್ಟು ಪ್ರೋತ್ಸಾಹಿಸುತ್ತಿರು ವುದೆಂದೂ ನಾನು ಮನಸ್ಸಾಕ್ಷಿಯಾಗಿ ಹೇಳಬಲ್ಲೆನು. ಮತ್ತೊಂದು ಮಾತು:-ಈ ನಂದಿನಿಯ ಸರ್ವಸ್ವಾತಂತ್ರ್ಯವೂ ನಮ್ಮ ಮಾತೃಕೈವದ ಚರಣಾರವಿಂದದಲ್ಲಿ ಸಮರ್ಪಿಸಲ್ಪಟ್ಟಿರುವುದರಿಂದ, ಗ್ರಂಥದ ಮೊದಲಿಂದ ಕಡೆಯವರೆಗೆ ಸಾರಿ ಸಾರಿ ಹೇಳುತ್ತಿರುವ ಮಾತೆ, ಮಾತೃ ದೈವ, ಭಗವತೀಮಾತೃ, ಜನನೀ ಜನ್ಮದಾತೆ, ತಾಯಿ, ಅಮ್ಮ' ಮೊದಲಾದ ಶಬ್ದಗಳು, ನಮ್ಮ ಸೋದರಿಯರಿಗೆ ಒಂದುವೇಳೆ ಹಾಸ್ಯಾಸ್ಪದವಾಗಿ ತೋರಿ ಬಂದರೂ ನನಗದರಿಂದ ಏನೂ ಅಪಮಾನವಾಗುವಂತಿಲ್ಲ. ಅದೂ ಅಲ್ಲದೆ ಅನಂದವಾರವಶತೆಯಿಂದ ಲೇಖನದಲ್ಲಿ ನ್ಯೂನಾತಿರಿಕ್ತ ದೋಷಗಳನ್ನು ಮಾಡಿದ್ದರೆ ಕೂಡ. ಅವನ್ನು ಸಹಜ ಕ್ಷಮೆಯಿಂದ ಕ್ರಮಪಡಿಸಿಕೊಳ್ಳುವಂತೆ ಎಚ್ಚರಿಸುವುದು ನಮ್ಮ ದೇಶಬಾಂಧವರನ್ನೇ ಸೇರಿರುವುದೆಂದರೂ ತಪ್ಪಾಗು ವಂತಿಲ್ಲ. ಮುಖ್ಯವಾಗಿ ಸದ್ದು ರುದತ್ತವಾದೀ ಅನನ್ಯಮಾತೃಭಾವನೆಯ ಜಡಭಕ್ತಿಯೇ ನನಗೆ ಸ್ಥಿರವಾಗಿದ್ದು, ನಂದಿನೀ-ಸತೀಷಿಷಿಣಿಯರ ದೆಸೆ ಯಿಂದ ದೇಶಭಾಷಾ ಮಾತೃ ಸೇವೆಯಲ್ಲಿ ಇಹಜನ್ಮಧಾರಣೆಯ ಪರಾಕಾಷ್ಟೆ ಯನ್ನು ಕಾಣುವಂತೆ ಅನುಗ್ರಹಿಸಿ, ಶಾಶ್ವತಸುಖಾನುಭವಕ್ಕೆ ಪಾತ್ರಳನ್ನಾಗಿ ಮಾಡೆಂದು ಪುತ್ರವತ್ಸಲೆಯಾದ ಆ ನಮ್ಮ ಭಗವತಿಯನ್ನು ಕುರಿತು ಮೊರೆ ಬಿಡುತ್ತಿರುವೆನು. ರಾಕ್ಷಸ ಸಂಗ ಮಾಘಶುದ್ಧ ಇತಾಶಿಸುತ್ತಿರುವ ತ್ರಯೋದಶಿ, ಬುಧವಾt' ! ಮಾತೃಮಂದಿರಂ. ನಂಜನಗೂಡು) ದೇಶಭಗಿನೀ ವಿದ್ಯಾರ್ಥಿನಿ